ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ಅಹಮದಾಬಾದಿನಲ್ಲಿ 9 ತಿಂಗಳ ಹಸುಗೂಸಿಗೆ HMPV ಸೋಂಕು ತಗುಲಿರುವುದು ದೃಢಪಟ್ಟಿದೆ.
ಜನವರಿ 6 ರಂದು ಕೆಮ್ಮು, ಶೀತ ಮತ್ತು ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಂಡು ಮಗುವಿಗೆ ಸೋಂಕು ತಗುಲಿದೆ. ನವಜಾತ ಶಿಶು ವಿದೇಶಕ್ಕೆ ಹೋಗಿದ್ದ ಅಥವಾ ಇತರ ಯಾವುದೇ ಪ್ರಯಾಣದ ಇತಿಹಾಸ ಹೊಂದಿಲ್ಲ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹೇಳಿದೆ.
ಎರಡು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಸೋಂಕು ತಗಲಿತ್ತು. ಆಸ್ತಮಾದಿಂದ ಬಳಲುತ್ತಿರುವ ವೃದ್ಧ ರೋಗಿ ಸದಸ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿ 16 ರಂದು ರಾಜಸ್ಥಾನದಿಂದ ಬಂದ ಎರಡು ತಿಂಗಳ ಶಿಶುವಿನಲ್ಲಿ ಸೋಂಕು ದೃಢಪಟ್ಟಿತ್ತು. ಇದು ಗುಜರಾತಿನ ಮೊದಲ ಪ್ರಕರಣವಾಗಿದೆ.