ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ನ ಅಹಮದಾಬಾದ್ನ ಜೆಬಾರ್ ಶಾಲೆಯಲ್ಲಿ 3 ನೇ ತರಗತಿಯ ವಿದ್ಯಾರ್ಥಿನಿ ಗಾರ್ಗಿ ರಣಪರಾ ಎಂಬ 8 ವರ್ಷದ ಪುಟ್ಟ ಬಾಲಕಿ ಹೃದಯ ಸ್ತಂಭನದಿಂದ ದುರಂತ ಸಾವಿಗೀಡಾಗಿದ್ದಾಳೆ.
ಗಾರ್ಗಿ ತನ್ನ ತರಗತಿಗೆ ಹೋಗುವಾಗ ಹೃದಯಾಗಾತಕ್ಕೀಡಾಗಿ ಕುಸಿದು ಸಾವನ್ನಪ್ಪಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಬಾಲಕಿ ಗಾರ್ಗಿ ಶಾಲೆಗೆ ಹೋಗಿದ್ದಾಗ ದಿಢೀರ್ ಅನಾರೋಗ್ಯಕ್ಕೀಡಾಗಿದ್ದು, ಶಾಲೆಯ ಲಾಬಿಯಲ್ಲಿ ಸ್ವಲ್ಪ ಹೊತ್ತು ಕುರ್ಚಿಯ ಮೇಲೆ ಕುಳಿತಿದ್ದಳು. ಆದರೆ ಕೆಲವೇ ಕ್ಷಣಗಳ ನಂತರ ಆಕೆ ಕುಸಿದು ಬಿದ್ದಳು. ಆಕೆಯ ಸಹಪಾಠಿಗಳು ಆಕೆಯ ಆರೈಕೆ ಮಾಡಿ ಶಾಲಾ ಸಿಬ್ಬಂದಿಗೆ ವಿಷಯ ತಿಳಿಸಿದರೂ ಅಷ್ಟು ಹೊತ್ತಿಗಾಗಲೇ ಬಾಲಕಿ ಗಾರ್ಗಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಬಳಿಕ ಆಸ್ಪತ್ರೆಯಲ್ಲಿ ಆಕೆಯನ್ನು ಬದುಕಿಸಲು ತಕ್ಷಣದ ಪ್ರಯತ್ನಗಳ ಹೊರತಾಗಿಯೂ, ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆಗೆ ಮೊದಲು ಗಾರ್ಗಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎಂದು ಪೋಷಕರು ಹೇಳಿದ್ದಾರೆ ಎಂದು ವರದಿಯಾಗಿದೆ.
Another 8 Yr Old Dies of Sudden Cardiac Arrest, A Growing Concern!
Ahmedabad: An 8-year-old girl, Gargi Ranpara a 3rd standard student at Zebar School in Ahmedabad #Gujarat tragically passed away due to cardiac arrest. Gargi felt uneasy while walking into her classroom. She… pic.twitter.com/lr4RVLp2Z4
— Nabila Jamal (@nabilajamal_) January 12, 2025