ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿಕಾರಿಗಳೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗ್ತಾರೆ? ಸಮಯ ಬರುತ್ತೆ, ಎಂದು ಡಿಸಿ, ಎಸ್‍ಪಿ, ಜಿ.ಪಂ. ಸಿಇಓ, ಎಸಿ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿ, ಎಸ್‍ಪಿಗೆ ಬಡ್ತಿ ನೀಡಿದ್ದಾರೆ. ಇವರೆಲ್ಲ ಕಾಂಗ್ರೆಸ್ ಸರ್ಕಾರವೇ ಇರುತ್ತೆ ಎಂದುಕೊಂಡಿದ್ದಾರೆ. ದೇವೇಗೌಡರ ಕುಟುಂಬದ್ದು ಮುಗಿದೇ ಹೋಯಿತು ಎಂದುಕೊಂಡಿದ್ದಾರೆ ಎಂದು ಗುಡುಗಿದ್ದಾರೆ.
ಈ ದೇಶದ ರಾಜಕೀಯ ನೋಡಿದ್ದೇನೆ. ನಾನು ಸೋತಿದ್ದೇನೆ, ಗೆದ್ದಿದ್ದೇನೆ. ಕೇಸ್ ಹಾಕಿದರೆ ಹೆದರುತ್ತೇನೆ ಎಂದುಕೊಂಡಿದ್ದಾರೆ. ಇಂತಹ ಬಹಳ ಜನರನ್ನ ನೋಡಿದ್ದೇನೆ ಎಂದಿದ್ದಾರೆ.