ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜಪೇಟೆಯಲ್ಲಿ ಗೋವಿನ ಕೆಚ್ಚಲನ್ನು ಕೊಯ್ದ ಘಟನೆಯಿಂದ ಹಿಂದೂಗಳ ಆಕ್ರೋಶ ಹೆಚ್ಚಾಗಿದೆ. ಒಂದೆಡೆ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದರೆ, ಇನ್ನೊಂದೆಡೆ ಹೇಯ ಕೃತ್ಯ ನಡೆದ ಸ್ಥಳದಲ್ಲಿಯೇ ಸಂಕ್ರಾಂತಿ ಆಚರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.
ಘಟನೆಯನ್ನು ಖಂಡಿಸಿ ನಾಳೆ ಹಿಂದೂಪರ ಸಂಘಟನೆಗಳು ಪ್ರತಿಭಟನಾ ರ್ಯಾಲಿಗೆ ಕರೆ ನೀಡಿವೆ. ಮೂರು ಕಡೆ ಪ್ರತಿಭಟನೆ ನಡೆಯಲಿದೆ: ಮೈಸೂರು ಬ್ಯಾಂಕ್ ವೃತ್ತ, ಚಾಮರಾಜಪೇಟೆ ವಾಣಿಜ್ಯ ರಸ್ತೆ, ಚಾಮರಾಜಪೇಟೆಯ ಸಿದ್ದಾಶ್ರಮ ಟ್ರಸ್ಟ್.
ಹೆಚ್ಚುವರಿಯಾಗಿ, ಭಾನುವಾರದೊಳಗೆ ರಾಜ್ಯಾದ್ಯಂತ ಪ್ರತಿಭಟನೆಗೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ವಿಎಚ್‌ಪಿ, ಬಜರಂಗದಳ, ಚಾಮರಾಜಪೇಟೆ ನಾಗರಿಕ ಒಕ್ಕೂಟ ಸೇರಿದಂತೆ ಸುಮಾರು 15-20 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.
ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಹಸು ಮಾಲೀಕನ ಮನೆಗೆ ಭೇಟಿ ನೀಡಲಿದ್ದು, ಚಾಮರಾಜಪೇಟೆಯಲ್ಲಿ ಸಂಕ್ರಾಂತಿ ಆಚರಿಸಲಿದ್ದಾರೆ.