ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದೆ. ರಾಯರ ದರ್ಶನಕ್ಕೆ ಮತ್ತು ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಭಕ್ತರು ಆಗಮಿಸಿದ್ದಾರೆ.
ಸಂಕ್ರಾಂತಿಯಂದು ಬೆಳಗ್ಗೆ ಮಂತ್ರಾಲಯ ರಾಯರ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತದೆ. ತುಂಗಭದ್ರಾ ನದಿಯಲ್ಲಿ ಭಕ್ತರು ಸ್ನಾನ ಮಾಡಿ ಪುನೀತರಾಗುತ್ತಾರೆ. ಸುಮಾರು ಎರಡು ಕಿ.ಮೀವರೆಗೂ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ.
ನದಿಯಲ್ಲಿ ನೀರಿಲ್ಲದ ಕಾರಣ ಭಕ್ತರು ಅಲ್ಪಸ್ವಲ್ಪ ನೀರಿನಲ್ಲಿ ಸ್ನಾನ ಮಾಡಿ ನದಿಯಲ್ಲಿ ದೀಪಗಳನ್ನು ಹರಿಬಿಟ್ಟು ಹರಕೆಗಳನ್ನು ತೀರಿಸುತ್ತಿದ್ದಾರೆ.