ಮಕರ ಜ್ಯೋತಿ ರೂಪದಲ್ಲಿ ಸಹಸ್ರಾರು ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರುಶನ ಭಾಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಕ್ರಾಂತಿಯಂದು ಅಯ್ಯಪ್ಪ ಸ್ವಾಮಿ ತನ್ನ ಭಕ್ತರಿಗೆ ಮಕರ ಜ್ಯೋತಿಯ ರೂಪದಲ್ಲಿ ದರುಶನ ಭಾಗ್ಯ ಕೊಟ್ಟಿದ್ದಾನೆ.

ಸಂಜೆ 6:44ಕ್ಕೆ ಅಯ್ಯಪ್ಪ ದೇವಸ್ಥಾನದ ಎದುರಿನ ಪೊನ್ನಂಬಲಮೇಡುವಿನಲ್ಲಿ ಜ್ಯೋತಿ ದರ್ಶನವಾಯಿತು. ಆ ವೇಳೆ ಅಯ್ಯಪ್ಪನ ಭಕ್ತಿಗೀತೆಯನ್ನು ಪಠಿಸುತ್ತಾ ಅನೇಕ ಭಕ್ತರು ಮಕರ ಜ್ಯೋತಿಯ ದರ್ಶನ ಪಡೆದರು.

ಮಕರ ಸಂಕ್ರಾಂತಿ ನಿಮಿತ್ತ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಂದಳ ರಾಜ ಮನೆತನದಿಂದ ತಂದ ಆಭರಣಗಳಿಂದ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿ ವೇಳೆ ಅಯ್ಯಪ್ಪ ಭಕ್ತರಿಗೆ ಜ್ಯೋತಿಯ ರೂಪದಲ್ಲಿ ದರ್ಶನ ಭಾಗ್ಯ ಲಭಿಸಿತು.

ಭಕ್ತಾದಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲು, ಪೊಲೀಸರು ದೇವಸ್ಥಾನ ಮತ್ತು ಸುತ್ತಮುತ್ತ ಭದ್ರತೆಯನ್ನು ಒದಗಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!