ಮಹಾ ಕುಂಭಮೇಳ ಸಂಭ್ರಮ: ಭೋಲೇನಾಥನ ಆರಾಧನೆಯಲ್ಲಿ ಐಐಟಿ ಬಾಬಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾ ಕುಂಭಮೇಳ ಕೋಟ್ಯಂತರ ಭಕ್ತರನ್ನ ಸೆಳೆಯುತ್ತಿರೋ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ. ಪ್ರಯಾಗ್‌ರಾಜ್‌ ಮಿನಿ ಭಾರತದಂತೆ ಕಾಣಿಸ್ತಿದೆ. ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ. 144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ.

ಈಗಾಗಲೇ ಆರಂಭವಾಗಿರುವ ಮಹಾ ಕುಂಭಮೇಳದಲ್ಲಿ 40 ಕೋಟಿ ಜನರು ಭಾಗವಹಿಸಿದರೂ ಪ್ರಮುಖ ಆಕರ್ಷಣೆ ಮಾತ್ರ ನಾಗಸಾಧುಗಳು. ಜನವರಿ 13 ರಿಂದ ಫೆಬ್ರುವರಿ 26ರ ವರೆಗೆ 4 ಸಾವಿರ ಹೆಕ್ಟರ್ ಪ್ರದೇಶದಲ್ಲಿ ನಡೆಯುವ ಕುಂಭಮೇಳ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಇಂತಹ ಮಹಾನ್ ಕಾರ್ಯಕ್ರಮದಲ್ಲಿ ಐಐಟಿ ಬಾಂಬೆಯ ಬಾಬಾ ಕೂಡ ಒಬ್ಬರಾಗಿದ್ದಾರೆ.

ಐಐಟಿ ಬಾಂಬೆಯ ಬಾಬಾ ಅಭೇ ಸಿಂಗ್ ಅವರು ಮೂಲತಹ ಹರಿಯಾಣದವರು. ವೈಜ್ಞಾನಿಕ ಅನ್ವೇಷಣೆಗಳನ್ನು ತೊರೆದು ಆಧ್ಯಾತ್ಮಿಕದತ್ತ ವಾಲಿದ್ದಾರೆ. ಅಂದರೆ ವಿಜ್ಞಾನದಿಂದ ಆಧ್ಯಾತ್ಮಿಕತೆಗೆ ವಾಲಿದ್ದಾರೆ. ಏರೋಸ್ಪೇಸ್ ಇಂಜಿನಿಯರ್ ಮುಖ್ಯಸ್ಥರಾಗಿದ್ದರು. ಇವರನ್ನು ಇಂಜಿನಿಯರ್ ಬಾಬಾ ಎಂತಲೂ ಕರೆಯುತ್ತಾರೆ. ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗವನ್ನು ತೊರೆದು ಆಧ್ಯಾತ್ಮಿಕತೆ ಕಡೆಗೆ ಗಮನ ಹರಿಸಿ ಈಗ ಬಾಬಾ ಆಗಿದ್ದಾರೆ.

ಅಭೇ ಸಿಂಗ್ ಅವರು, ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಬಾಂಬೆ (ಐಐಟಿ ಬಾಂಬೆ)ಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್​ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಕಾಲೇಜಿನಲ್ಲಿ ಇರುವಾಗಲೇ ಕ್ಯಾಂಪಸ್​ನಲ್ಲಿ ಆಯ್ಕೆ ಆಗಿ ಪ್ರತಿಷ್ಠಿತಿ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಬಾಂಬೆಯಲ್ಲೇ ನೆಲಸಿ ಕಾರ್ಪೊರೇಟ್ ಜಗತ್ತಿನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.

ಆರ್ಟ್ಸ್​ ಮತ್ತು ಫೋಟೋಗ್ರಾಫಿಯಲ್ಲಿ ಆಸಕ್ತಯುಳ್ಳ ಅಭೇ ಸಿಂಗ್ ಅವರು 4 ವರ್ಷ ಇವುಗಳಲ್ಲೇ ಕಾಲ ಕಳೆದರು. ಫೋಟೋಗ್ರಾಫಿಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರಿಂದ ಕಾರ್ಪೊರೇಟ್ ಕೆಲಸಕ್ಕೆ ಗುಡ್​ಬೈ ಹೇಳಿ ಕೋಚಿಂಗ್ ಸೆಂಟರ್ ಓಪನ್ ಮಾಡಿ ಭೌತಶಾಸ್ತ್ರದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಇದರಲ್ಲಿ ತಾವು ಅಂದುಕೊಂಡ ಯಶಸ್ಸು ಸಿಗಲಿಲ್ಲ. ಇದೇ ಅವರಿಗೆ ಜೀವನದ ಟರ್ನಿಂಗ್ ಪಾಯಿಂಟ್ ಆಯಿತು. ಕಾರ್ಪೊರೇಟ್, ಕೋಚಿಂಗ್, ಫೋಟೋಗ್ರಾಫಿ ನಂತರ ಆಧ್ಯಾತ್ಮಿಕತೆಯನ್ನು ಆಯ್ಕೆ ಮಾಡಿಕೊಂಡರು.

ಆಧ್ಯಾತ್ಮಿಕತೆ ಸ್ವೀಕರಿಸಿದ ಬಳಿಕ ಅಭೇ ಅವರು ಶಿವನ ಪರಮ ಭಕ್ತರಾಗಿದ್ದಾರೆ. ಪ್ರಸ್ತುತ ಅವರು ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುತ್ತಾ ಸಂತೋಷವಾಗಿದ್ದೇನೆ. ವಿಜ್ಞಾನದ ಮೂಲಕ ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುತ್ತೇನೆ. ನಾನು ಆಧ್ಯಾತ್ಮಿಕತೆಯ ಆಳಕ್ಕೆ ಹೋಗುತ್ತಿದ್ದೇನೆ. ಎಲ್ಲದಕ್ಕೂ ಶಿವನೇ ಕಾರಣ. ಸತ್ಯವೇ ಶಿವ ಎಂದು ಇಂಜಿನಿಯರ್ ಬಾಬಾ ಅವರ ದೃಢವಾದ ನಂಬಿಕೆ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!