ದಿನಭವಿಷ್ಯ: ಗೃಹಬಳಕೆಯ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ

ಮೇಷ
ವ್ಯವಹಾರದಲ್ಲಿ  ಆತುರದ ಕ್ರಮ ಬೇಡ. ಅದರಿಂದ ನಿಮಗೇ ಹಾನಿ.  ಕುಟುಂಬಸ್ಥರ ಭಾವನೆ ಗೌರವಿಸಿ. ಸಂಘರ್ಷಕ್ಕೆ ಹೊಂದಾಣಿಕೆಯೆ ಮದ್ದು.
ವೃಷಭ
ಕೆಲಸದ ಒತ್ತಡದ ಮಧ್ಯೆಯೂ ಕುಟುಂಬ ಸದಸ್ಯರ ಜತೆ  ಕಾಲ ಕಳೆಯುವ ಅವಕಾಶ. ವ್ಯವಹಾರದಲ್ಲಿ ಪ್ರಗತಿ. ಆರ್ಥಿಕ ಲಾಭ.
ಮಿಥುನ
ಯಾವುದೋ ಕೊರಗು. ಹತಾಶೆ. ಅಸಹನೆ. ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣ. ಸಹನೆಯಿಂದ ನಿಭಾಯಿಸಿ.
ಕಟಕ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಉದ್ಯೋಗದ ಒತ್ತಡ ಬದಿಗಿಟ್ಟು ಅವರೊಂದಿಗೆ ಸಂವಹನ ಸಾಽಸಿ. ಹಣಕಾಸು ಕೊರತೆ.
ಸಿಂಹ
ಕೆಲವು ವಿಚಾರ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ಹಿರಿಯರ ಸಲಹೆಗಳಿಗೆ ಅಸಮಾಧಾನ ಬೇಡ. ಅದನ್ನು ಪಾಲಿಸಿರಿ.
ಕನ್ಯಾ
ಮನೆಯಲ್ಲಿ  ಭಿನ್ನಾಭಿಪ್ರಾಯ ಉಂಟಾದೀತು. ವೃಥಾ ಆರೋಪ ಹೊರಿಸಲು ಹೋಗದಿರಿ. ಎಲ್ಲವನ್ನು ಪರಾಮರ್ಶಿಸಿ ನಿರ್ಧರಿಸಿ.
ತುಲಾ
ಕುಟುಂಬ ಸದಸ್ಯರ ಜತೆ ತಪ್ಪಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳಿ. ಧನವ್ಯಯ ಹೆಚ್ಚು. ಖರ್ಚುವೆಚ್ಚದಲ್ಲಿ ಮಿತ ಸಾಽಸಿ.
ವೃಶ್ಚಿಕ
ಕೆಲಸದಲ್ಲಿ ತೋರುವ ಪ್ರಸಂಗವಧಾನತೆ ಯಶಸ್ಸು ತರುವುದು. ಕೆಲವರ ಟೀಕೆಗೆ ಕಿವಿಗೊಡಬೇಡಿ. ಕೌಟುಂಬಿಕ ಸೌಹಾರ್ದತೆ ಕಾಪಾಡಲು ಆದ್ಯತೆ ಕೊಡಿ.
ಧನು
ಆಸ್ಪತ್ರೆ ಭೇಟಿ, ಇನ್ನಿತರ ಕಾರಣದಿಂದ ಖರ್ಚು ಹೆಚ್ಚಾಗಬಹುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಶಾಂತಿ, ಸಮಾಧಾನ ಮೂಡಲಿದೆ.
ಮಕರ
ಸಹೋದ್ಯೋಗಿಗಳ ಜತೆ ಹೊಂದಾಣಿಕೆ ಇರಲಿ. ನಿಮ್ಮ ದಾರಿಯೇ ಸರಿ ಎಂಬ ಕಠಿಣ ಧೋರಣೆ ತರವಲ್ಲ. ಆರ್ಥಿಕ ಬಿಕ್ಕಟ್ಟು ಪರಿಹಾರ ಕಾಣಲಿದೆ.
ಕುಂಭ
ಯಶಸ್ವೀ ದಿನ. ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ತೊಡಕಿನಲ್ಲಿ  ಸಿಲುಕಿಕೊಂಡಿದ್ದರೆ ಇಂದು ನಿರಾಳತೆ ಸಿಗುವುದು. ಧನಪ್ರಾಪ್ತಿ.
ಮೀನ
ಭವಿಷ್ಯದ ಕುರಿತಂತೆ ಅನಿಶ್ಚಿತತೆ. ಅದರಿಂದ ಮನಸ್ಸಿಗೆ ವ್ಯಾಕುಲ.  ನಿಜವಾಗಿ ಆತಂಕ ಅನವಶ್ಯ. ನಿಮಗೆ ಪೂರಕ ವಾತಾವರಣವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!