ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ನಾವು ಎಲ್ಲಿದ್ದೇವೆ, ಏನು ಮಾಡ್ತಿದ್ದೇವೆ ಹಾಗೂ ಏನನ್ನು ತಿನ್ನುತ್ತಿದ್ದೇವೆ ಎನ್ನುವ ಮಾಹಿತಿಯನ್ನು ಜನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡ್ತಾರೆ. ಫೋಟೊ ತೆಗೆದ ತಕ್ಷಣ ಅದನ್ನು ಜನರಿಗೆ ಸ್ನಾಪ್‌ಚಾಟ್‌ನಲ್ಲಿ ಕಳಿಸ್ತಾರೆ.
ಇದೇ ರೀತಿ ಮೊಬೈಲ್‌ನಲ್ಲಿ ಸ್ನಾಪ್‌ಚಾಟ್ ಬಳಕೆ ಮಾಡುತ್ತಾ ಕಾರು ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದಾರೆ.ಭೋಪಾಲ್ನ ಕೋಲಾರ ಪ್ರದೇಶದಲ್ಲಿ ಘಟನೆ ನಡೆದಿದೆ. ಚಾಲಕ ಸ್ನ್ಯಾಪ್‌ಚಾಟ್ ಮಾಡುತ್ತಾ ಹೋಗಿ ಕಾರು ಸಮೇತ ನದಿಗೆ ಹಾರಿದ್ದಾರೆ.
ಆರು ಲೇನ್ ಸೇತುವೆಯ ಮೇಲೆ ತಿರುವಿನಲ್ಲಿ ನ್ಯಾವಿಗೇಟ್ ಮಾಡುವಾಗ ವಾಹನದ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಮೃತರನ್ನು ಕಾರು ಚಲಾಯಿಸುತ್ತಿದ್ದ ವಿನೀತ್ (22) ಪಲಾಶ್ ಗಾಯಕ್ವಾಡ್ (22) ಎಂದು ಗುರುತಿಸಲಾಗಿದೆ. ಪಿಯೂಷ್ ಎಂಬುವವರು ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ವಿನೀತ್ ಹೆಚ್ಚಿನ ವೇಗದಲ್ಲಿ ಇದ್ದಿದ್ದಷ್ಟೇ ಅಲ್ಲದೆ ಸ್ನ್ಯಾಪ್‌ಚಾಟ್ ಬಳಸುತ್ತಿದ್ದ, ಸೇತುವೆಯ ಮೇಲೆ ತಿರುವು ಪಡೆಯಲು ಪ್ರಯತ್ನಿಸುವಾಗ ಅವರು ವಾಹನದ ನಿಯಂತ್ರಣ ಕಳೆದುಕೊಂಡಿದ್ದ. ಇದರಿಂದಾಗಿ ಕಾರು ತಡೆಗೋಡೆಯಿಂದ ಡಿಕ್ಕಿ ಹೊಡೆದು ಕೆಳಗಿನ ನದಿಗೆ ಬಿದ್ದಿತ್ತು.