ಫಿಫಾ ವಿಶ್ವಕಪ್​ಗೂ ಮುನ್ನ 30 ಲಕ್ಷ ಬೀದಿ ನಾಯಿಗಳ ಹತ್ಯೆಗೆ ಮೊರಾಕೊ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

2030ರ ಫಿಫಾ ವಿಶ್ವಕಪ್ ಅನ್ನು ಆಯೋಜಿಸಲು ಮೊರಾಕೊ ಸಿದ್ಧವಾಗುತ್ತಿದ್ದಂತೆ ಸುಮಾರು 3 ಮಿಲಿಯನ್ ನಾಯಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂಬ ವರದಿಗಳು ಜಗತ್ತಿನಾದ್ಯಂತ ಟೀಕೆಗೆ ಕಾರಣವಾಗಿದೆ. ಬೀದಿ ನಾಯಿಗಳಿಗೆ ಸ್ಟ್ರೈಕ್ನೈನ್ ಅನ್ನು ಚುಚ್ಚುಮದ್ದಿನ ಮೂಲಕ ಕೊಲ್ಲಲಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಇದು ಅತ್ಯಂತ ವಿಷಕಾರಿ ರಾಸಾಯನಿಕವಾಗಿದೆ.

2030ರ ಫಿಫಾ ವಿಶ್ವಕಪ್‌ಗೆ ಮುಂಚಿತವಾಗಿ 30 ಲಕ್ಷ ಬೀದಿನಾಯಿಗಳನ್ನು ಕೊಲ್ಲಲು ಮೊರಾಕೊ ಪ್ಲಾನ್ ಮಾಡುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಮೊರಾಕೊ, ಸ್ಪೇನ್ ಮತ್ತು ಪೋರ್ಚುಗಲ್ ಎಂಬ 3 ದೇಶಗಳಲ್ಲಿ ನಡೆಯಲಿರುವ ಮುಂದಿನ ಫುಟ್ಬಾಲ್ ವಿಶ್ವಕಪ್‌ಗಾಗಿ ಮೊರಾಕೊದ ನಗರಗಳಿಗೆ ಭೇಟಿ ನೀಡುವ ಫುಟ್‌ಬಾಲ್ ಅಭಿಮಾನಿಗಳಿಗೆ ಮೊರಾಕೊ ನಗರ ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ನಾಯಿಗಳ ಹತ್ಯೆಯ ಮೂಲಕ ಬೀದಿನಾಯಿ ಮುಕ್ತ ರಸ್ತೆಗಳನ್ನು ಸಿದ್ಧಪಡಿಸುವ ಕಾರ್ಯಕ್ಕೆ ಮೊರಾಕೊ ನಿರ್ಧರಿಸಿದೆ.

ಈ ಕಾರ್ಯ ಜಾಗತಿಕವಾಗಿ ಆಕ್ರೋಶವನ್ನು ಹುಟ್ಟುಹಾಕಿವೆ. ಏಕೆಂದರೆ, ಈ ವರದಿಗಳು ‘ಕ್ರೂರ’ ಮತ್ತು ‘ಆಘಾತಕಾರಿ’ ಎಂದು ಟೀಕೆಗೆ ಒಳಗಾಗಿವೆ. ಕೆಲವು ವರದಿಗಳು ಉತ್ತರ ಆಫ್ರಿಕಾದ ರಾಷ್ಟ್ರವು ನಾಯಿಗಳನ್ನು ಕೊಲ್ಲುವ ಮೂಲಕ ಬೀದಿಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದೆ ಎಂದು ಹೇಳುತ್ತವೆ. ಈಗಾಗಲೇ ದೇಶದ ಹಲವಾರು ಸ್ಥಳಗಳಲ್ಲಿ ನಾಯಿಗಳನ್ನು ಕೊಲ್ಲಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here