ಹೊಸ ದಿಗಂತ ವರದಿ, ಮಂಡ್ಯ :
ಫೆಬ್ರವರಿ 18ರಂದು ಹಸೆಮಣೆ ಏರಬೇಕಿದ್ದ ಹುಡುಗಿ ಶನಿವಾರ ಬೆಳಿಗ್ಗೆ ಸ್ಕೂಟರ್ ಅಪಘಾತದಲ್ಲಿ ಮೃತಪಟ್ಟು ಮಸಣ ಸೇರಿದ ದುರ್ಘಟನೆ ಶನಿವಾರ ಮಳವಳ್ಳಿ ತಾಲೂಕಿನ, ಹಲಗೂರು ಸಮೀಪದ ಹೆಚ್. ಬಸಾಪುರ ಗೇಟ್ ಬಳಿ ಜರಗಿದೆ.
ಮೂಲತಃ ಬಾಳೆ ಹೊನ್ನಿಗ ಗ್ರಾಮದ ವಾಸಿ ಕೃಷ್ಣೇಗೌಡರ ಮಗಳಾದ ಬಿ.ಕೆ.ಶರಣ್ಯ(26) ಕಾರ್ಯನಿಮಿತವಾಗಿ ಹಲಗೂರಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಮಳವಳ್ಳಿ ಕಡೆಯಿಂದ ಅತಿ ವೇಗವಾಗಿ ಬಂದ ಬೈಕು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಫೆಬ್ರವರಿ 18ರಂದು ಇವರ ವಿವಾಹ ನಿಶ್ಚಯವಾಗಿತ್ತು ದುರಾದೃಷ್ಟ ಹಸೆಮಣೆ ಏರಬೇಕಿದ್ದ ಆಕೆ ಮಸಣಕ್ಕೆ ಸೇರುವುದು ದುರಾದೃಷ್ಟ. ಕುಟುಂಬದವರ ಅಕ್ರದಾನ ಮುಗಿಲು ಮುಟ್ಟಿತ್ತು.
ಈ ಸಂಬಂಧವಾಗಿ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಸಬ್ ಇನ್ಸ್ಪೆಕ್ಟರ್ ಬಿ. ಮಹೇಂದ್ರ ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.