ಹೊಸದಿಗಂತ ವರದಿ ಹಾವೇರಿ :
ಚುನಾವಣಾ ಕಾರ್ಯದಲ್ಲಿ ಹೆಚ್ಚಿನ ಅನುಭವ ಹೊಂದಿದ್ದ, ಹಾಗೂ ನಿಷ್ಪಕ್ಷಪಾತ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರಿಗೆ ರಾಜ್ಯದಲ್ಲೇ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ರವಿವಾರ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜಿಲ್ಲಾಧಿಕಾರಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಹಿರೇಕೆರೂರು ತಹಶೀಲ್ದಾರ ರೇಣುಕಾ ಎಂ. ಅವರಿಗೆ ಉತ್ತಮ ಸಹಾಯಕ ಮತದಾನ ನೊಂದಣಾಧಿಕಾರಿ ಹಾಗೂ ಹಾವೇರಿ ವಿಧಾನ ಸಭಾಕ್ಷೇತ್ರದ ಭಾಗಸಂಖ್ಯೆ ೫೨, ೮೪ರ ಬೂತ್ ಮಟ್ಟದ ಅಧಿಕಾರಿ ಶಿಕ್ಷಕ ಗುಡ್ಡಪ್ಪ ಲಚ್ಚಮ್ಮವರ ಅವರಿಗೆ ಉತ್ತಮ ಬಿಎಲ್‌ಒ ಪ್ರಶಸ್ತಿ ನೀಡಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.



