ಹೊಸದಿಗಂತ ವರದಿ ರಾಣೇಬೆನ್ನೂರ:
ಚಿರತೆಯೊಂದು ದಾಳಿ ಮಾಡಿ 15ಕ್ಕೂ ಅಧಿಕ ಕುರಿಗಳನ್ನು ಬಲಿಪಡೆದ ಘಟನೆ ತಾಲೂಕಿನ ಮೆಡ್ಲೇರಿ ಭಾಗದಲ್ಲಿ ನಡೆದಿದೆ.
ಚಿರತೆ ದಾಳಿಯಿಂದಾಗಿ ಕಳೆದೊಂದು ವಾರದಲ್ಲಿ ಹಂತ ಹಂತವಾಗಿ 50ಕ್ಕೂ ಅಧಿಕ ಕುರಿಗಳನ್ನು ಬಲಿ ಪಡೆದಂತಾಗಿದರ. ಕುರಿದೊಡ್ಡಿ ಹಾಗೂ ಜಮೀನಿನ ಹೊರಭಾಗದಲ್ಲಿ ಚಿರತೆ ದಾಳಿಯಿಂದ ಲಕ್ಷಾಂತರ ಮೌಲ್ಯದ ಕುರಿಗಳನ್ನು ಕಳೆದುಕೊಂಡಿರುವ ಕುರಿಗಾಹಿಗಳು ಚಿಂತೆಗೀಡಾಗಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಕುರಿ ಕಳೆದುಕೊಂಡ ಮಾಲೀಕರಿಗೆ ಪರಿಹಾರ ನೀಡಲು ಸಹ ಹಿಂದೇಟು ಹಾಕುತ್ತಿದ್ದಾರೆ ಎಂದು ಕುರಿಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.