ಮಹಾ ಕುಂಭ ಮೇಳ | ತ್ರಿವೇಣಿ ಸಂಗಮದಲ್ಲಿ ಗೌತಮ್ ಅದಾನಿ ಪ್ರಾರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮಂಗಳವಾರ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭ ಮೇಳದಲ್ಲಿ ತಮ್ಮ ಕುಟುಂಬದೊಂದಿಗೆ ಭಾಗವಹಿಸಿದರು.

ಅದಾನಿ, ಅವರ ಪತ್ನಿ, ಅದಾನಿ ಫೌಂಡೇಶನ್ ನ ಅಧ್ಯಕ್ಷೆ ಪ್ರೀತಿ ಅದಾನಿ ಮತ್ತು ಮಗ, ಅದಾನಿ ಪೋರ್ಟ್ಸ್ ಮತ್ತು ಎಸ್ಇಝಡ್ ಲಿಮಿಟೆಡ್ (APSEZ) ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಕೂಡ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Imageಬಳಿಕ ಅದಾನಿ ಅವರು ಜಾತ್ರೆಯ ಇಸ್ಕಾನ್ ದೇವಾಲಯದ ಶಿಬಿರಕ್ಕೆ ಭೇಟಿ ನೀಡಿ ಮಹಾಪ್ರಸಾದ (ಪವಿತ್ರ ಊಟ) ತಯಾರಿಸಲು ಸಹಾಯ ಮಾಡಿದರು. ಜನವರಿ 13 ರಿಂದ ಪ್ರಾರಂಭವಾದ ಮಹಾ ಕುಂಭ ಮೇಳದಲ್ಲಿ ಭಕ್ತರಿಗೆ ಊಟವನ್ನು ಬಡಿಸಲು ಅದಾನಿ ಗ್ರೂಪ್ ಮತ್ತು ಇಸ್ಕಾನ್ ಅಥವಾ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಪ್ರಜ್ಞೆ ಕೈಜೋಡಿಸಿವೆ.

ಈ ಸಂದರ್ಭದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಗೌತಮ್ ಅದಾನಿ ಮಹಾಕುಂಭವು “ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳ ಮಹಾನ್ ಯಾಗ” ಎಂದು ತಿಳಿಸಿದ್ದಾರೆ.

Imageಜನವರಿ 13 ರಿಂದ ಫೆಬ್ರವರಿ 26 ರವರೆಗಿನ ಮಹಾಕುಂಭ ಮೇಳದ ಸಂಪೂರ್ಣ ಅವಧಿಗೆ ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ ‘ಮಹಾಪ್ರಸಾದ್ ಸೇವಾ’ ಉಪಕ್ರಮದಡಿ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಮಾತಾಡಿದ ಅವರು, ಮಹಾಕುಂಭ ಮೇಳದಿಂದ ನಾನು ತುಂಬಾ ಉತ್ಸುಕನಾಗಿದ್ದೇನೆ. ಕುಂಭ ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರವಾಗಿದೆ. ಇಸ್ಕಾನ್ ಸಹಯೋಗದೊಂದಿಗೆ ಭಕ್ತರಿಗಾಗಿ ನಾವು ಮಹಾಪ್ರಸಾದ ಸೇವೆಯನ್ನು ಮಾಡುತ್ತಿರುವುದು ನನ್ನ ಅದೃಷ್ಟ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!