ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟ ವಿನಾಯಕನ್ ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನೆರೆಮನೆಯವರ ಎದುರು ಅಶ್ಲೀಲವಾಗಿ ನಟ ವರ್ತಿಸಿದ್ದಾರೆ. ನಟನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ನೋಡಿ ಅನೇಕರು ಟೀಕಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಈ ವೇಳೆ, ಸೊಂಟದ ಮೇಲಿಂದ ಲುಂಗಿ ಬಿದ್ದು ಹೋಗಿದ್ರೂ ಲೆಕ್ಕಿಸದೇ ಕುಡಿದು ಜಗಳಕ್ಕೆ ನಿಂತಿದ್ದಾರೆ. ನಟನ ಈ ನಡೆ ನೋಡಿದ ಅನೇಕರು ಇವರನ್ನು ಚಿತ್ರರಂಗದಿಂದ ನಿಷೇಧ ಮಾಡಿ ಎಂದು ಅಗ್ರಹಿಸಿದ್ದಾರೆ.