ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗರಾಜ್ನ ಮಹಾ ಕುಂಭಮೇಳದಲ್ಲಿ ಪ್ರತಿನಿತ್ಯ ಕೋಟ್ಯಂತರ ಭಕ್ತರು ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಇವತ್ತು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಅನೇಕ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳಲಾಗುತ್ತೆ.
ಮಹಾಕುಂಭಮೇಳ, ಅಘೋರಿ- ಸಾಧಗಳ ಹಬ್ಬ. ತ್ರಿವೇಣಿ ಸಂಗಮದ ಪುಣ್ಯಸ್ನಾನ. ಭೂಮಿಯ ಮೇಲಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ. ಭೂಮಿ ಮೇಲೆ ಒಂದೇ ಕಡೆ ಹೆಚ್ಚು ಜನರು ಸೇರುವ ಸ್ಥಳ. ಈ ಪುಣ್ಯ ಸ್ಥಳದಲ್ಲಿ ಜನವರಿ 13 ರಿಂದ ಸುಮಾರು 9 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಇನ್ನು ಪ್ರಯಾಗ್ರಾಜ್ನ ಧಾರ್ಮಿಕ ಹಬ್ಬದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಗೃಹ ಸಚಿವ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವ ಸಾಧ್ಯತೆಯಿದೆ.
ಮಧ್ಯಾಹ್ನ 12ಕ್ಕೆ ಸಿಎಂ ಯೋಗಿ ಸರ್ಕಾರದ ಕ್ಯಾಬಿನೆಟ್ ಸಭೆ ಪ್ರಯಾಗ್ರಾಜ್ನ ಇಂಟಿಗ್ರೇಟೆಡ್ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ನಲ್ಲಿ ನಡೆಯಲಿದೆ. ಇದರಲ್ಲಿ ಯೋಗಿ ಸರ್ಕಾರದ ಎಲ್ಲಾ 54 ಸಚಿವರನ್ನ ಕರೆಸಲಾಗಿದೆ. ಸಭೆಯಲ್ಲಿ ವಾರಾಣಾಸಿ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀರ್ಮಾನ, ಗಂಗಾ ನದಿಗೆ ಅಡ್ಡಲಾಗಿ ಶಾಶ್ವತ ಸೇತುವೆಗಳ ನಿರ್ಮಾಣ ಬಗ್ಗೆ ಚರ್ಚೆ ಜೊತೆಗೆ ಹಲವು ಯೋಜನೆಗಳ ಮತ್ತು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗುತ್ತೆ. ಇದಾದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಡೀ ಸಚಿವ ಸಂಪುಟದೊಂದಿಗೆ ಸಂಗಮ ಸ್ನಾನ ಮಾಡಲಿದ್ದಾರೆ.