Sunday, January 25, 2026
Sunday, January 25, 2026
spot_img

ಚಹಲ್‌ಗೆ ಮತ್ತೊಂದು ಶಾಕ್: RJ ಮಹ್ವಾಶ್ ಜೊತೆಗಿನ ಗೆಳೆತನಕ್ಕೂ ಗುಡ್ ಬೈ ಹೇಳಿದ ಟೀಂ ಇಂಡಿಯಾ ಸ್ಪಿನ್ನರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಮೈದಾನದಲ್ಲಿ ಮಿಂಚಿದ್ದರೂ, ವೈಯಕ್ತಿಕ ಬದುಕಿನಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ಕಷ್ಟಗಳ ಸರಣಿ ಮುಂದುವರಿದಂತಾಗಿದೆ. ಧನಶ್ರೀ ವರ್ಮಾ ಜೊತೆಗಿನ ವಿಚ್ಛೇದನದ ಬಳಿಕ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಚಹಲ್, ಇದೀಗ ಮತ್ತೊಂದು ನಿರಾಸೆ ಎದುರಿಸಿದ್ದಾರೆ.

ಅವರ ಜೊತೆ ಹೆಚ್ಚು ಕಾಣಿಸಿಕೊಂಡಿದ್ದ ಆರ್‌ಜೆ ಮಹ್ವಾಶ್ ಜೊತೆಗಿನ ಸಂಬಂಧವೂ ಈಗ ಅಂತ್ಯಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಧನಶ್ರೀ ವರ್ಮಾ ಜೊತೆಗಿನ ಡಿವೋರ್ಸ್ ನಂತರ ಚಹಲ್ ಮತ್ತು ಮಹ್ವಾಶ್ ಹಲವು ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ದೇಶ-ವಿದೇಶ ಪ್ರವಾಸ, ಹಬ್ಬಗಳ ಆಚರಣೆ, ಕ್ರಿಕೆಟ್ ಪಂದ್ಯಾವಳಿಗಳ ಸ್ಟ್ಯಾಂಡ್‌ಗಳಲ್ಲಿ ಹಾಜರಿ—ಇವೆಲ್ಲವೂ ಇಬ್ಬರ ನಡುವಿನ ಆತ್ಮೀಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಮೆಚ್ಚುಗೆಯ ಪೋಸ್ಟ್‌ಗಳು ಡೇಟಿಂಗ್ ಗಾಸಿಪ್‌ಗಳಿಗೆ ಇನ್ನಷ್ಟು ಇಂಧನ ನೀಡಿದ್ದವು.

ಆದರೆ ಇತ್ತೀಚೆಗೆ ಪರಿಸ್ಥಿತಿ ಬದಲಾಗಿದೆ. ಇಬ್ಬರೂ ಪರಸ್ಪರ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದು, ಗೆಳೆತನದಲ್ಲಿ ಬಿರುಕು ಮೂಡಿರುವ ಸೂಚನೆ ನೀಡಿದೆ. ಮೂಲಗಳ ಪ್ರಕಾರ, ಅಸಮಾಧಾನಗಳೇ ದೂರವಾಗಲು ಕಾರಣವಾಗಿವೆ ಎನ್ನಲಾಗುತ್ತಿದೆ.

ಕಳೆದ ವರ್ಷ ಚಹಲ್ ಎರಡನೇ ಮದುವೆ ಬಗ್ಗೆ ನೀಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ಕೂಡ ಭಾರೀ ಚರ್ಚೆ ಹುಟ್ಟಿಸಿತ್ತು. ಆದರೆ ಇದೀಗ ಆ ಊಹಾಪೋಹಗಳಿಗೆ ತೆರೆ ಬಿದ್ದಂತೆ ಕಾಣುತ್ತಿದೆ.

Must Read