ಅರಣ್ಯ ರಕ್ಷಕನಿಂದಲೇ ಆನೆ ದಂತ ಸಾಗಾಟ: ಫಾರೆಸ್ಟ್ ವಾಚರ್ ಸಹಿತ ಇಬ್ಬರ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಣ್ಯವನ್ನು ರಕ್ಷಣೆ ಮಾಡಬೇಕಿದ್ದ ಅರಣ್ಯ ರಕ್ಷಕನಿಂದಲೇ ಇದೀಗ ದಂತ ಸಾಗಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಆನೆ ದಂತ ಸಾಗಿಸುತ್ತಿದ್ದ ಫಾರೆಸ್ಟ್ ವಾಚರ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಲಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕೊಳ್ಳೇಗಾಲ ತಾಲೂಕಿನಲ್ಲಿ ಅರಣ್ಯ ರಕ್ಷಕನು ಬಾತನ ಸಂಬಂಧಿಯ ಜೊತೆಗೆ ಸೇರಿ ಆನೆ ದಂತಗಳನ್ನು ಸಾಗಾಟ ಮಾಡುತ್ತಿದ್ದ. ಈ ವೇಳೆ ಅರಣ್ಯ ಅಧಿಕಾರಿಗಳು ಕ್ಷೀಪ್ರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ಬೈಕ್ ನಲ್ಲಿ ಆನೆದಂತ ಸಾಧಿಸುತ್ತಿದ್ದಾಗ ಇಬ್ಬರು ಖದೀಮರು ಸಿಕ್ಕಿ ಬಿದ್ದಿದ್ದಾರೆ. ವಾಚರ್ ಚಂದ್ರಶೇಖರ್ (27) ಹಾಗೂ ಬಸವರಾಜ್ ನನ್ನು ಅರಣ್ಯ ಅಧಿಕಾರಿಗಳು ಇದೀಗ ಅರೆಸ್ಟ್ ಮಾಡಿದ್ದಾರೆ.

ಆನೆ ದಂತವನ್ನು ಚಾಪೆಯಲ್ಲಿ ಸುತ್ತಿಕೊಂಡು ಬೈಕ್​ನಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ, ಆನೆ ದಂತ ಸಮೇತ ಇಬ್ಬರನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಂಧಿತರಿಂದ ಎರಡು ಆನೆ ದಂತ, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧ‌ನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!