ಹೊಸದಿಗಂತ ವರದಿ, ಮಂಗಳೂರು:
ಮಂಗಳೂರು ಬ್ಯಾಂಕ್ ದರೋಡೆ ಕೇಸ್ ನಲ್ಲಿ ಎಲ್ಲಾ ಹಣ ಮತ್ತು ಚಿನ್ನಾಭರಣಗಳನ್ನ ರಿಕವರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಮಂಗಳೂರು ದರೋಡೆ ಕೇಸ್‌ನಲ್ಲಿ 6 ಜನರು ಇದ್ದಾರೆ ಎಂದು ಮಾಹಿತಿ ಇತ್ತು. ಈಗಾಗಲೇ 3 ಜನರ ಬಂಧನ ಮಾಡಲಾಗಿದೆ. 10-12 ಕೋಟಿ ಹಣ ಮತ್ತು ಬಂಗಾರವನ್ನು ರಿಕವರಿ ಮಾಡಿದ್ದೇವೆ. ಉಳಿದವರ ಹುಡುಕಾಟಕ್ಕೆ ತನಿಖೆ ನಡೆಯುತ್ತಿದೆ. ಅವರ ಲೊಕೇಶನ್ ಕೂಡ ಪತ್ತೆ ಹಚ್ಚಲಾಗಿದೆ. ಅವರನ್ನು ಬೇಗ ಅರೆಸ್ಟ್ ಮಾಡುತ್ತೇವೆ ಎಂದು ತಿಳಿಸಿದರು.
ದರೋಡೆ ಕೇಸ್‌ನಲ್ಲಿ ಸ್ಥಳೀಯರ ಕೈವಾಡ ಇದೆ ಎಂಬ ಬಿಜೆಪಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ತನಿಖೆ ಆಗುತ್ತದೆ.ಬಿಜೆಪಿ ಶಾಸಕರಿಗೆ ಗೊತ್ತಿದ್ದರೆ ಮೊದಲೇ ಹೇಳಬೇಕಿತ್ತು. ಈಗ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲಾ ಗೊತ್ತಾಗುತ್ತದೆ ಎಂದರು.
ಇನ್ನು ಬೀದರ್ ಎಟಿಎಂ ದರೋಡೆ ಕೇಸ್‌ನಲ್ಲಿ ಬಹಳ ಹತ್ತಿರದಲ್ಲಿ ಬಂದಿದ್ದೇವೆ. ಯುಪಿಯಿಂದಲೇ ಬೈಕ್ ತಂದಿದ್ದಾರೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಈ ಕೇಸ್ ಕೂಡಾ ಇತ್ಯರ್ಥ ಮಾಡುತ್ತೇವೆ ಎಂದರು.