ಧರ್ಮಕ್ಕೆ ಬೆಲೆ ಇಲ್ಲದ ಜಗತ್ತಿನಲ್ಲಿ ಇರೋದಿಲ್ಲ ಎಂದು ಬರೆದಿಟ್ಟು ಮನೆ ಬಿಟ್ಟ ಕಾಲೇಜ್‌ ಸ್ಟುಡೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಧರ್ಮದ ಜಗತ್ತನ್ನ ತೊರೆದು ಸತ್ಯದ ಕಡೆ ಹೋಗುತ್ತಿದ್ದೇನೆ, ನಾನು ವಿಷ್ಣುವಿನ ಮಗ, ನನ್ನನ್ನು ಹುಡುಕಬೇಡಿ ಎಂದು ಬರೆದು ಬೆಂಗಳೂರಿನ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದಾನೆ.

ಮೋಹಿತ್ ಋಷಿ ನಾಪತ್ತೆಯಾದ ವಿದ್ಯಾರ್ಥಿ. ವಿದ್ಯಾರಣ್ಯಪುರದ ನಿವಾಸಿ ಅರ್ಜುನ್ ಕುಮಾರ್ ಎಂಬುವವರ ಪುತ್ರ ಮೋಹಿತ್ ಋಷಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ. ಜನವರಿ 16ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ಪುಸ್ತಕದಲ್ಲಿ ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ ಎಂದು  ಬರೆದಿದ್ದಾನೆ.

ಈ ಬಗ್ಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಯ ಪೋಷಕರು ದೂರು ನೀಡಿದ್ದಾರೆ. ಸದ್ಯ ಉತ್ತರ ಪ್ರದೇಶದ ಪ್ರಯಾಜ್ ರಾಜ್‌ನಲ್ಲಿ ಕುಂಭಮೇಳ ನಡೆಯುತ್ತಿರುವುದರಿಂದ ಮೋಹಿತ್ ಪ್ರಯಾಗ್ ರಾಜ್‌ಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ಮಾಡಿ ಹುಡುಕಾಡುತ್ತಿರುವ ಪೊಲೀಸರು, ಮೋಹಿತ್ ಪ್ರಯಾಗ್‌ರಾಜ್‌ಗೆ ಹೋಗಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!