ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರತಿಷ್ಠಿತ ಹಾಗೂ ಅತ್ಯುನ್ನತ ಪ್ರಶಸ್ತಿಗಳಾದ 2025ರ ಸಾಲಿನ ಸಾಧಕರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪ್ರಕಟಗೊಂಡಿದೆ.
ಐವರು ಸಾಧಕರಿಗೆ ಪದ್ಮ ವಿಭೂಷಣ ಹಾಗೂ 13 ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ಗೌರವ ಸಿಕ್ಕಿದೆ. 113 ಮಂದಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಪೈಕಿ ಕರ್ನಾಟಕದ ಶತಾವಧಾನಿ ಆರ್. ಗಣೇಶ್ಗೆ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಉಳಿದಂತೆ 7 ಮಂದಿ ಪದ್ಮಶ್ರೀಗೆ ಭಾಜನರಾಗಿದ್ದಾರೆ.
ಪದ್ಮ ವಿಭೂಷಣ ಸಾಧಕರ ಪಟ್ಟಿ
ಧರ್ಮೇಂದ್ರ ಸಿಂಗ್ ಡಿಯೋಲ್ (ಮಹಾರಾಷ್ಟ್ರ) ಕ್ಷೇತ್ರ: ಕಲೆ (ಸಿನಿಮಾ) (ಮರಣೋತ್ತರ)
ಕೆ. ಟಿ. ಥಾಮಸ್ (ಕೇರಳ) ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ನ್ಯಾಯಾಂಗ)
ಎನ್. ರಾಜಂ (ಉತ್ತರ ಪ್ರದೇಶ) ಕ್ಷೇತ್ರ: ಕಲೆ (ಸಂಗೀತ – ಪಿಟೀಲು)
ಪಿ. ನಾರಾಯಣನ್ (ಕೇರಳ) ಕ್ಷೇತ್ರ: ಸಾಹಿತ್ಯ ಮತ್ತು ಶಿಕ್ಷಣ
ವಿ. ಎಸ್. ಅಚ್ಯುತಾನಂದನ್ (ಕೇರಳ) ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ರಾಜಕೀಯ) (ಮರಣೋತ್ತರ)
ಪದ್ಮ ಭೂಷಣ ಪ್ರಶಸ್ತಿ
ಅಲ್ಕಾ ಯಾಗ್ನಿಕ್ (ಮಹಾರಾಷ್ಟ್ರ) ಕ್ಷೇತ್ರ: ಕಲೆ (ಹಿನ್ನೆಲೆ ಗಾಯನ)
ಭಗತ್ ಸಿಂಗ್ ಕೋಶ್ಯಾರಿ (ಉತ್ತರಾಖಂಡ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು
ಕಲ್ಲಿಪಟ್ಟಿ ರಾಮಸಾಮಿ ಪಳನಿಸ್ವಾಮಿ (ತಮಿಳುನಾಡು)ಕ್ಷೇತ್ರ: ವೈದ್ಯಕೀಯ
ಮಮ್ಮುಟ್ಟಿ (ಕೇರಳ)ಕ್ಷೇತ್ರ: ಕಲೆ (ಸಿನಿಮಾ)
ಡಾ. ನೋರಿ ದತ್ತಾತ್ರೇಯಡು (ಅಮೆರಿಕ/ತೆಲಂಗಾಣ)ಕ್ಷೇತ್ರ: ವೈದ್ಯಕೀಯ (ಆಂಕೊಲಾಜಿ)
ಪಿಯೂಷ್ ಪಾಂಡೆ (ಮಹಾರಾಷ್ಟ್ರ)ಕ್ಷೇತ್ರ: ಕಲೆ (ಜಾಹೀರಾತು ಮತ್ತು ಸಂವಹನ) (ಮರಣೋತ್ತರ)
ಎಸ್. ಕೆ. ಎಂ. ಮೈಲಾನಂದನ್ (ತಮಿಳುನಾಡು)ಕ್ಷೇತ್ರ: ಸಮಾಜ ಸೇವೆ
ಶತಾವಧಾನಿ ಆರ್. ಗಣೇಶ್ (ಕರ್ನಾಟಕ)ಕ್ಷೇತ್ರ: ಕಲೆ (ಸಾಹಿತ್ಯ/ಅವಧಾನ ಕಲೆ)
ಶಿಬು ಸೊರೇನ್ (ಜಾರ್ಖಂಡ್)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)
ಉದಯ್ ಕೋಟಕ್ (ಮಹಾರಾಷ್ಟ್ರ)ಕ್ಷೇತ್ರ: ವ್ಯಾಪಾರ ಮತ್ತು ಕೈಗಾರಿಕೆ (ಬ್ಯಾಂಕಿಂಗ್)
ವಿ. ಕೆ. ಮಲ್ಹೋತ್ರಾ (ದೆಹಲಿ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು (ಮರಣೋತ್ತರ)
ವೆಳ್ಳಪ್ಪಳ್ಳಿ ನಟೇಶನ್ (ಕೇರಳ)ಕ್ಷೇತ್ರ: ಸಾರ್ವಜನಿಕ ವ್ಯವಹಾರಗಳು
ವಿಜಯ್ ಅಮೃತರಾಜ್ (ತಮಿಳುನಾಡು)ಕ್ಷೇತ್ರ: ಕ್ರೀಡೆ (ಟೆನ್ನಿಸ್)







