ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಕಳೆದ ವಾರ ಮೈಸೂರಿನ ವೈದ್ಯ ಡಾ. ಅಜಯ್ ಹೆಗ್ಡೆ ನೀಡಿದ್ದ ಎಪಿಡ್ಯೂರಲ್ ಇಂಜೆಕ್ಷನ್ ವರ್ಕ್ ಆಗಿದೆ.
ಹೀಗಾಗಿ ದರ್ಶನ್ಗೆ ಆಪರೇಷನ್ ಅವಶ್ಯಕತೆ ಇಲ್ಲ. ನಾನು ಮೊದಲಿಗಿಂತಲೂ ಚೆನ್ನಾಗಿದ್ದೇನೆ ಎಂದು ವೈದ್ಯರಿಗೆ ದರ್ಶನ್ ಹೇಳಿದ್ದಾರೆ.
ಕಳೆದ ವಾರ ಕೊಟ್ಟ ಇಂಜೆಕ್ಷನ್ನಿಂದ ದರ್ಶನ್ ಬೆನ್ನು ನೋವಿನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಈಗಾಗಲೇ ಪ್ರತಿನಿತ್ಯ ವರ್ಕೌಟ್ ಶುರು ಮಾಡಿರುವ ದರ್ಶನ್ ಫುಲ್ ಬಾಡಿ ವರ್ಕೌಟ್ ಶುರು ಮಾಡಿದ ನಂತರ ಏನಾದರು ನೋವು ಕಾಣಿಸಿಕೊಂಡರೆ ಮತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ.