ಕ್ಯಾನ್ಸರ್ ಪೀಡಿತರ ನಿಸ್ವಾರ್ಥ ಸೇವೆ ಕಂಡು ಕಲಬುರಗಿಯ ಡಾ. ವಿಜಯಲಕ್ಷ್ಮೀಗೆ ಒಲಿದು ಬಂತು ‘ಪದ್ಮಶ್ರೀ’

ಹೊಸದಿಗಂತ ಕಲಬುರಗಿ:

ಸುಮಾರು ಎರಡು ದಶಕಗಳಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ ಅವರ ನೋವಿನ ಉಪಶಮನಕ್ಕಾಗಿ ಹಾಗೂ ರೋಗ ನಿವಾರಣೆಗಾಗಿ ಶ್ರಮಿಸುತ್ತಿರುವ ಮೂಲತಃ ಕಲಬುರ್ಗಿಯ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಡಾ. ವಿಜಯಲಕ್ಷ್ಮಿ ದೇಶಮಾನೆ ಮೂಲತಃ ಕಲ್ಬುರ್ಗಿಯಲ್ಲಿ ಜನಿಸಿ ಎಂ ಬಿ ಬಿ ಎಸ್, ಎಂ ಎಸ್ (ಜನರಲ್ ಸರ್ಜರಿ) ಎಫ.ಎ. ಐ. ಎಸ್. ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಎನ್ಕಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದಾರೆ. ಅಮೇರಿಕಾ, ಸ್ವೀಡನ್, ಮುಂಬೈ, ಕೊಲಂಬೊಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಮೂಲತ ಕಲಬುರಗಿಯ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ವಿವಿಧ ಪತ್ರಿಕೆಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

ಡಾಕ್ಟರ್ ವಿಜಯಲಕ್ಷ್ಮಿ ದೇಶಮಾನೆಯವರ ವೈದ್ಯಕೀಯ ಸೇವೆಗಳನ್ನು ಪರಿಗಣಿಸಿ ಹಲವು ಸಂಸ್ಥೆಗಳು ಕಳಶ ಪ್ರಶಸ್ತಿ, ರಾಷ್ಟ್ರೀಯ ರತ್ನ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, 1999 ವರ್ಷದ ಮಹಿಳಾ ಪ್ರಶಸ್ತಿ ಕೊಟ್ಟು ಗೌರವಿಸಿದೆ.

ಅಂತರಾಷ್ಟ್ರೀಯ ಸ್ಟಡಿ ಸರ್ಕಲ್ 2003 ಹಾಗೂ 2004ರಲ್ಲಿ ಚಿನ್ನದ ಪದಕ ನೀಡಿ ಗೌರವಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು ಕ್ಯಾನ್ಸರ್ ರೋಗಕ್ಕೆ ತುತ್ತಾದ ದುರ್ದೈವಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ಡಾ.ವಿಜಯಲಕ್ಷ್ಮೀ ಮಾನೆ ಅವರಿಗೆ ಭಾತರದ ರಾಷ್ಟ್ರಪತಿಗಳಾದ ದ್ರೌಪದಿ ಮುರಮು ಅವರು ದೇಶದ 76ನೇ ಗಣರಾಜ್ಯೋತ್ಸವ ಅಂಗವಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!