ಬಾಂಗ್ಲಾದೇಶಕ್ಕೆ ಶಾಕ್ ಕೊಟ್ಟ ಅಮೆರಿಕ: ಯೂನಸ್ ಸರ್ಕಾರಕ್ಕೆ ನೀಡುವ ಎಲ್ಲಾ ನೆರವುಗಳು ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶಕ್ಕೆ ನೀಡಲಾಗುವ ತನ್ನ ಎಲ್ಲಾ ನೆರವು ಮತ್ತು ಯೋಜನೆಗಳನ್ನು ಸ್ಥಗಿತಗೊಳಿಸಲು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (USAID) ಆದೇಶಿಸಿದೆ. ಈ ನಿರ್ಧಾರ ಬಾಂಗ್ಲಾದೇಶದ ಯೂನಸ್ ಸರ್ಕಾರಕ್ಕೆ ದೊಡ್ಡ ಹೊಡೆತ ಸಿಕ್ಕಿದಂತಾಗಿದೆ.

ಈ ನಿರ್ಧಾರದಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಬಾಂಗ್ಲಾದೇಶಕ್ಕೆ ನೀಡಲಾಗುತ್ತಿದ್ದ ನೆರವು ನಿಲ್ಲುತ್ತದೆ. ತನ್ನ ನಿರ್ಧಾರದಲ್ಲಿ, USAID ಎಲ್ಲಾ ರೀತಿಯ ಕೆಲಸದ ಆದೇಶಗಳು, ಒಪ್ಪಂದಗಳು ಮತ್ತು ಖರೀದಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿದೆ.

USAID ಬಾಂಗ್ಲಾದೇಶಕ್ಕೆ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಆರ್ಥಿಕ ಸುಧಾರಣೆಯಂತಹ ಕ್ಷೇತ್ರಗಳಲ್ಲಿ ವ್ಯಾಪಕ ಸಹಾಯವನ್ನು ನೀಡುತ್ತಿದೆ.

USAID ನಿಧಿ ಸ್ಥಗಿತದ ಕುರಿತು ತನ್ನ ಪತ್ರದಲ್ಲಿ US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಕಾರ್ಯನಿರ್ವಾಹಕ ಆದೇಶವನ್ನು ಉಲ್ಲೇಖಿಸಿದೆ. ಅದರಂತೆ ಎಲ್ಲಾ USAID/ಬಾಂಗ್ಲಾದೇಶ ಅನುಷ್ಠಾನ ಪಾಲುದಾರರಿಗೆ ನಿಮ್ಮ USAID/ಬಾಂಗ್ಲಾದೇಶ ಒಪ್ಪಂದಗಳು, ಕಾರ್ಯ ಆದೇಶಗಳು, ಅನುದಾನಗಳು, ಸಹಕಾರವನ್ನು ತಕ್ಷಣವೇ ನಿಲ್ಲಿಸಲು ಅಥವಾ ಅಮಾನತುಗೊಳಿಸಲು ನಿರ್ದೇಶಿಸುತ್ತದೆ ಎಂದು ಹೇಳಿದೆ.

ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇಸ್ರೇಲ್ ಮತ್ತು ಈಜಿಪ್ಟ್ ಹೊರತುಪಡಿಸಿ ಉಕ್ರೇನ್‌ಗೆ ಎಲ್ಲಾ ವಿದೇಶಿ ನೆರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಈ ಆದೇಶವು ಸಾಮಾನ್ಯ ನೆರವಿನಿಂದ ಹಿಡಿದು ಮಿಲಿಟರಿ ನೆರವಿನವರೆಗೆ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇಸ್ರೇಲ್ ಮತ್ತು ಈಜಿಪ್ಟ್‌ಗೆ ತುರ್ತು ಆಹಾರ ನೆರವು ಮತ್ತು ಮಿಲಿಟರಿ ನೆರವು ಮಾತ್ರ ಇದರಿಂದ ವಿನಾಯಿತಿ ಪಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!