Budget 2025: ಈ ಬಾರಿ ಬಜೆಟ್‌ ಮಂಡನೆ ಯಾವಾಗ? ಇನ್ನಿತರ ಡೀಟೇಲ್ಸ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1, ಶನಿವಾರದಂದು ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರ ಸತತ ಎಂಟನೇ ಬಜೆಟ್ ಮಂಡನೆ ಆಗಿದೆ.

ಮಂದಗೊಳ್ಳುವಂತೆ ತೋರುತ್ತಿರುವ ಆರ್ಥಿಕತೆಗೆ ಚುರುಕು ಮುಟ್ಟಿಸುವ ಬಹುದೊಡ್ಡ ಸವಾಲು ಮತ್ತು ನಿರೀಕ್ಷೆಗಳು ಈ ಬಜೆಟ್​ನಲ್ಲಿವೆ. ಮಧ್ಯಮ ವರ್ಗದವರ ಮೇಲಿರುವ ಅಪಾರ ತೆರಿಗೆ ಹೊರೆಯ ಭಾರ ಇಳಿಸುವ ಅಪೇಕ್ಷೆಯೂ ಇದೆ. ವಿವಿಧ ಉದ್ಯಮಗಳು ಹೆಚ್ಚಿನ ಉತ್ತೇಜನಕ್ಕಾಗಿ ಕಾಯುತ್ತಿವೆ.

ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂಬ ಒತ್ತಡವೂ ಇದೆ. ಇಷ್ಟೆಲ್ಲಾ ನಿರೀಕ್ಷೆ, ಅಪೇಕ್ಷೆ, ಒತ್ತಡಗಳ ನಡುವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್​ನಲ್ಲಿ ಯಾವುದಕ್ಕೆ ಹೆಚ್ಚು ಗಮನ ಕೊಡಬಹುದು ಎನ್ನುವ ಕುತೂಹಲವಂತೂ ಇದೆ.

ಫೆಬ್ರುವರಿ 1, ಶನಿವಾರ ಬೆಳಗ್ಗೆ 11 ಗಂಟೆಗೆ ನಿರ್ಮಲಾ ಸೀತಾರಾಮನ್ ಅವರಿಂದ ಸಂಸತ್ತಿನಲ್ಲಿ ಬಜೆಟ್ ಮಂಡನೆ ಆರಂಭವಾಗುತ್ತದೆ. 2024ರ ಬಜೆಟ್​ನಲ್ಲಿ ಅವರ ಭಾಷಣ ಸುದೀರ್ಘದ್ದಾಗಿತ್ತು. ಈ ಬಾರಿಯದ್ದು ಅವರಿಗೆ ಎಂಟನೇ ಬಜೆಟ್ ಆಗಿದೆ. ಇದರಲ್ಲಿ ಎರಡು ಮಧ್ಯಂತರ ಬಜೆಟ್ ಕೂಡ ಸೇರಿವೆ.

ಬಜೆಟ್​ಗೆ ಒಂದು ದಿನ ಮೊದಲು ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಬಜೆಟ್ ಅಧಿವೇಶನ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲ ಹಂತವು ಜನವರಿ 31, ಶುಕ್ರವಾರ ಆರಂಭವಾಗುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆ ಆಗುತ್ತದೆ. ಫೆಬ್ರುವರಿ 13ರವರೆಗೂ ಮೊದಲ ಹಂತದ ಬಜೆಟ್ ಸೆಷನ್ ಮುಂದುವರಿಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!