ಪಾಣಿಪತ್- ದೆಹಲಿ ರೈಲ್ವೆ ಹಳಿ ಮೇಲೆ ಕಬ್ಬಿಣದ ರಾಡ್ ಪತ್ತೆ, ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರೈಲುಗಳನ್ನು ಹಳಿ ತಪ್ಪಿಸುವ ಹಾಗೂ ರೈಲು ಸೇವೆಯಲ್ಲಿ ವ್ಯತ್ಯಯ ಉಂಟು ಮಾಡಲು ಯತ್ನಿಸುತ್ತಿರುವ ಪ್ರಕರಣಗಳು ಉತ್ತರ ಭಾರತದಲ್ಲಿ ಮತ್ತೆ ವರದಿಯಾಗಿದೆ.

ಕೆಲದಿನಗಳ ಹಿಂದೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತಿತರ ಕಡೆಗಳಲ್ಲಿ ರೈಲು ಹಳಿಗಳ ಮೇಲೆ ಮಣ್ಣಿನ ರಾಶಿ, ಕಬ್ಬಿಣದ ರಾಡು ಇಡುವ ಮೂಲಕ ರೈಲು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಘಟನೆಗಳು ಇತ್ತೀಚಿಗೆ ಸ್ವಲ್ಪ ಕಡಿಮೆಯಾಗಿತ್ತು. ಇದೀಗ ಮತ್ತೆ ಘಟನೆಗಳು ಮರುಕಳಿಸಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯ ಪಾಣಿಪತ್-ದೆಹಲಿ ರೈಲು ಹಳಿ ಮೇಲೆ 18 ಅಡಿ ಉದ್ದದ ಕಬ್ಬಿಣದ ರಾಡ್ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಪಾಣಿಪತ್‌ನಿಂದ ಗನೌರ್‌ಗೆ ಹೋಗುತ್ತಿದ್ದ ರೈಲ್ವೇ ಇಂಜಿನ್‌ನ ಲೋಕೋ ಪೈಲಟ್ ಬುಧವಾರ ಗೋಹಾನಾ ಸೇತುವೆಯ ಬಳಿ ರೈಲು ಹಳಿಯಲ್ಲಿ ಕಬ್ಬಿಣದ ರಾಡ್ ಬಿದ್ದಿರುವುದನ್ನು ಗಮನಿಸಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣವೇ ಲೋಕೋ ಪೈಲಟ್ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಕಾಯಿದೆಯ ಸೆಕ್ಷನ್ 150 (ದುರುದ್ದೇಶಪೂರಿತವಾಗಿ ರೈಲನ್ನು ಧ್ವಂಸಗೊಳಿಸುವುದು ಅಥವಾ ಧ್ವಂಸಗೊಳಿಸಲು ಪ್ರಯತ್ನಿಸುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!