ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ. ನನ್ನ ಮೇಲೆ ತಪ್ಪು ಹೊರಿಸೋದು ಬೇಡಿ ಎಂದು ಸುಧಾಕರ್ ಮಾತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಅವರ ಆಕ್ರೋಶದ ಮಾತು ನೋಡಿದೆ. ದಯವಿಟ್ಟು ಈ ರೀತಿ ಮಾತಾಡಲು ಹೋಗಬೇಡಿ. ರಾಜ್ಯದ ಅಧ್ಯಕ್ಷ ಆಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ, ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ ಎಂದರು.
ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ. ಸುಧಾಕರ್ ಅವರು ಹಿರಿಯರು, ಹೀಗೆಲ್ಲ ಮಾತಾಡಬಾರದು ಎಂದು ಮನವಿ ಮಾಡಿದ್ದಾರೆ.