ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಮುಖದ ಚರ್ಮ ಒಣಗಿದ್ದರೆ ಬೆಣ್ಣೆ ಹಣ್ಣಿಗೆ ಬಾದಾಮಿ ಎಣ್ಣೆ ಕಲಸಿ ಮುಖಕ್ಕೆ ಹಚ್ಚಿ ಚರ್ಮ ಮೃದುವಾಗುತ್ತದೆ.
ನಿಯಮಿತವಾಗಿ ಬೆಣ್ಣೆ ಹಣ್ಣನ್ನು ಸೇವಿಸಿದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗುತ್ತದೆ. ಬೆಣ್ಣೆ ಹಣ್ಣು ಮತ್ತು ಪಪ್ಪಾಯ ಹಣ್ಣಿನ ಜ್ಯೂಸ್ ಸೇವಿಸಿದರೆ ಅಸಿಡಿಟಿ ನಿವಾರಣೆಯಾಗುತ್ತದೆ.
ಬೆಣ್ಣೆ ಹಣ್ಣಿನ ಎಲೆಗಳನ್ನು ರುಬ್ಬಿ ಹೇರ್ ಪ್ಯಾಕ್ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಕಪ್ಪಗಾಗುತ್ತದೆ.