ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಇಂದು ಜಿಬಿಎಸ್ ವೈರಸ್ ಎಂದು ಕರೆಯಲ್ಪಡುವ ಗುಯಿಲಿನ್-ಬ್ಯಾರೆ ಸಿಂಡ್ರೋಮ್ನಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಪಿಂಪ್ರಿ-ಚಿಂಚ್ವಾಡ್ನಲ್ಲಿ 36 ವರ್ಷದ ರೋಗಿಯೊಬ್ಬರು ಈ ಸಿಂಡ್ರೋಮ್ನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ, ಪುಣೆಯಲ್ಲಿ ಜಿಬಿಎಸ್ ವೈರಸ್ನ ಗರಿಷ್ಠ ಪ್ರಕರಣಗಳು ವರದಿಯಾಗಿದ್ದು, 130 ಜನರಲ್ಲಿ ರೋಗ ಪತ್ತೆಯಾಗಿದೆ.
36 ವರ್ಷದ ಓಲಾ ಚಾಲಕನನ್ನು ಜನವರಿ 21ರಂದು ಯಶವಂತರಾವ್ ಚವಾಣ್ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿಯು ಈ ಸಾವಿಗೆ ಕಾರಣ ನ್ಯುಮೋನಿಯಾದಿಂದ ಶ್ವಾಸಕೋಶಕ್ಕೆ ಹಾನಿ ಎಂದು ಹೇಳಿದೆ. ಜಿಬಿಎಸ್ ಸಹ ಇದಕ್ಕೆ ಕಾರಣವಾಗಿದೆ. ಇದುವರೆಗೂ ಗುಯಿಲಿನ್ ಬ್ಯಾರೆ ಸಿಂಡ್ರೋಮ್ (GBS)ನ ಒಟ್ಟು ಪ್ರಕರಣಗಳ ಸಂಖ್ಯೆ 130ಕ್ಕೆ ಏರಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ಅವರು ತಜ್ಞರ ತಂಡವು ವಿವಿಧ ಮಾದರಿಗಳನ್ನು ಸಂಗ್ರಹಿಸಿರುವುದರಿಂದ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಸೋಂಕಿತರ ಮಲ ಮತ್ತು ರಕ್ತದ ಮಾದರಿಗಳನ್ನು NIV ಪುಣೆ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ಆದರೆ, ಅದರ ಹರಡುವಿಕೆಯ ಹಿಂದಿನ ಕಾರಣದ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ಸುಳಿವುಗಳು ಸಿಕ್ಕಿಲ್ಲ ಎಂದು ಹೇಳಿದ್ದಾರೆ.