ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ 2025ರ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದ್ದು, ಬಿಹಾರದಲ್ಲಿ ಮಖಾನಾ ಬೋರ್ಡ್ ಸ್ಥಾಪನೆ ಬಗ್ಗೆ ಸಚಿವೆ ಮಾತನಾಡಿದ್ದಾರೆ.
ಅಧಿಕ ಇಳುವಳಿ ಬೀಜಗಳ ಉತ್ಪಾದನೆ ಮತ್ತು ಸಂಶೋಧನೆಗಾಗಿ, ಎನ್‌ಸಿಸಿಎಫ್ ಕಡೆಯಿಂದ ಧಾನ್ಯಗಳ ಸಂಗ್ರಹಣೆ ಕೂಡ ಮಾಡಲಾಗುತ್ತದೆ. ಇನ್ನು ಹಣ್ಣು ಮತ್ತು ತರಕಾರಿಯನ್ನು ಬೆಳೆಗೆ ಪ್ರೊತ್ಸಾಹ ನೀಡಲಾಗುವುದು. ರಾಜ್ಯಗಳ ಜೊತೆಗೆ ಸಹಯೋಗದೊಂದಿಗೆ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.