ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಮ ವರ್ಗದವರಿಗೆ ತೆರಿಗೆ ಇಳಿಕೆ ಜೊತೆಗೆ ಹಲವು ಯೋಜನೆಗಳನ್ನು ಘೋಷಿಸಿದ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ 2025-26ನೇ ಸಾಲಿನ ಬಜೆಟ್ನಲ್ಲಿ ಕೃಷಿ, ಎಂಎಸ್ಎಂಇ, ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.
ಅನುದಾನ ಹಂಚಿಕೆಯಲ್ಲಿ ರಕ್ಷಣಾ ವಲಯಕ್ಕೆ ಸಿಂಹಪಾಲು ನೀಡಿದ್ದು, ಸರ್ಕಾರವೂ ಮೇಕ್ ಇನ್ ಇಂಡಿಯಾ ಪ್ರಯತ್ನ ಮುಂದುವರೆಸಲಾಗಿದೆ.
ಯಾವ ಇಲಾಖೆಗೆ ಎಷ್ಟು ಅನುದಾನ?
ಪ್ರಾಥಮಿಕ ವಲಯಗಳಲ್ಲಿ ಒಂದಾಗಿರುವ ರಕ್ಷಣಾ ವಲಯಕ್ಕೆ – 4,91,732 ಕೋಟಿ ರೂ
ಗ್ರಾಮೀಣ ಅಭಿವೃದ್ಧಿ – 2,66,817 ಕೋಟಿ ರೂ
ಗೃಹ ವ್ಯವಹಾರ – 2,33,211 ಕೋಟಿ ರೂ
ಕೃಷಿ ಮತ್ತು ಇತರೆ ಚಟುವಟಿಕೆ – 1,71,437 ಕೋಟಿ ರೂ
ಶಿಕ್ಷಣ – 1,28,650 ಕೋಟಿ ರೂ
ಆರೋಗ್ಯ – 98,311 ಕೋಟಿ ರೂ
ನಗರ ಅಭಿವೃದ್ಧಿ – 96,777 ಕೋಟಿ ರೂ
ಐಟಿ ಮತ್ತು ಟೆಲಿಕಾಂ – 95,298 ಕೋಟಿ ರೂ
ಇಂಧನ – 81,174 ಕೋಟಿ ರೂ
ವಾಣಿಜ್ಯ ಮತ್ತು ಕೈಗಾರಿಕೆ – 65,553 ಕೋಟಿ ರೂ
ಸಾಮಾಜಿಕ ಕಲ್ಯಾಣ – 60,052 ಕೋಟಿ ರೂ
ವೈಜ್ಞಾನಿಕ ಇಲಾಖೆ – 55,679 ಕೋಟಿ ರೂ.