ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ನ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಭಾನುವಾರ ಮುಂಬೈಗೆ ಭೇಟಿ ನೀಡಿದ್ದು, ಟೆನಿಸ್ ಬಾಲ್ ಕ್ರಿಕೆಟ್ ಆಡಿದ್ದಾರೆ.
ದಕ್ಷಿಣ ಮುಂಬೈನ ಪಾರ್ಸಿ ಜಿಮ್ಖಾನಾಗೆ ಭೇಟಿ ನೀಡಿದ ರಿಷಿ ಸುನಕ್, ಕ್ರಿಕೆಟ್ ಆಟವನ್ನು ಆನಂದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುನಕ್, ಟೆನಿಸ್ ಬಾಲ್ ಕ್ರಿಕೆಟ್ ಆಟವಿಲ್ಲದೆ ಮುಂಬೈನ ಯಾವುದೇ ಪ್ರವಾಸ ಪೂರ್ಣವಾಗುವುದಿಲ್ಲ ಎಂದಿದ್ದಾರೆ.