VIDEO | ಅಮೃತ ಸ್ನಾನದ ವೇಳೆ ಸಂತರು, ಋಷಿಗಳ ಮೇಲೆ ಹೆಲಿಕಾಪ್ಟರ್​ನಿಂದ ಹೂವಿನ ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹಾಕುಂಭ ನಡೆಯುತ್ತಿರುವ ಪ್ರಯಾಗ್​ರಾಜ್​ನಲ್ಲಿ ಬಸಂತ ಪಂಚಮಿಯ ಸಂದರ್ಭವಾದ ಇಂದು ತ್ರಿವೇಣಿ ಸಂಗಮದಲ್ಲಿ ‘ಅಮೃತ ಸ್ನಾನ’ಕ್ಕಾಗಿ ಲಕ್ಷಾಂತರ ಜನರು ಸೇರಿದ್ದಾರೆ. ಬೆಳ್ಳಂಬೆಳಗ್ಗೆಯೇ 62 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಈ ವೇಳೆ ಮೊದಲು ತೀರ್ಥ ಸ್ನಾನ ಮಾಡುವ ಸಂತರು ಮತ್ತು ಋಷಿಗಳ ಮೇಲೆ ಉತ್ತರ ಪ್ರದೇಶ ಸರ್ಕಾರ ಹೂವಿನ ದಳಗಳ ಮಳೆ ಸುರಿಸಿತು. ಉತ್ತರ ಪ್ರದೇಶದ ವಾರ್ತಾ ಇಲಾಖೆಯ ಪ್ರಕಾರ, ಇಂದು ಬೆಳಿಗ್ಗೆ 8 ಗಂಟೆಯ ಹೊತ್ತಿಗೆ 62 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ.

ಈ ವೇಳೆ ಭಕ್ತರ ಮೇಲೆ ಹೆಲಿಕಾಪ್ಟರ್​ನಲ್ಲಿ ಪುಷ್ಟವೃಷ್ಟಿ ಮಾಡಲಾಯಿತು. ನಾಗ ಸಾಧುಗಳು ತ್ರಿವೇಣಿ ಸಂಗಮದ ಘಾಟ್‌ಗಳಲ್ಲಿ ನೀರಿಗೆ ಧುಮುಕುವುದರೊಂದಿಗೆ ಪ್ರಾರಂಭವಾದ ಇಂದಿನ ಪವಿತ್ರ ಸ್ನಾನ ಆಚರಣೆಯು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ 2025ರ ಭಾಗವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!