ಮಹಾಕುಂಭದಲ್ಲಿ ಕಾಲ್ತುಳಿತ ದುರದೃಷ್ಟಕರ: ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಗೆ ‘ಸುಪ್ರೀಂ’ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

30 ಜನರ ಸಾವಿಗೆ ಕಾರಣವಾದ ಮಹಾಕುಂಭ ಕಾಲ್ತುಳಿತವನ್ನು ದುರದೃಷ್ಟಕರ ಘಟನೆ ಎಂದು ಸುಪ್ರೀಂ ಕೋರ್ಟ್ ವಿಷಾದ ವ್ಯಕ್ತಪಡಿಸಿದೆ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ಅಲಹಾಬಾದ್ ಹೈಕೋರ್ಟ್ ಮೊರೆ ಹೋಗುವಂತೆ ಅರ್ಜಿದಾರರಾದ ವಕೀಲ ವಿಶಾಲ್ ತಿವಾರಿ ಅವರಿಗೆ ನ್ಯಾಯಾಲಯ ಸೂಚಿಸಿದೆ.

“ಇದು ದುರದೃಷ್ಟಕರ ಘಟನೆ ಮತ್ತು ಕಳವಳಕಾರಿ ವಿಷಯ, ಆದರೆ ಹೈಕೋರ್ಟ್ ಅನ್ನು ಸಂಪರ್ಕಿಸಿ. ನ್ಯಾಯಾಂಗ ಆಯೋಗವನ್ನು ಈಗಾಗಲೇ ರಚಿಸಲಾಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತಿವಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!