ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮೂಲದ ಅಮೇರಿಕನ್ ಬ್ಯುಸಿನೆಸ್ ಲೀಡರ್ ಹಾಗೂ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಮಂತ್ರ ಪಠಣದ ಆಲ್ಬಮ್ ‘ತ್ರಿವೇಣಿ’ಗೆ ಪ್ರತಿಷ್ಠಿತ ಗ್ರ‍್ಯಾಮಿ ಪ್ರಶಸ್ತಿ ಲಭಿಸಿದೆ.
ಕರ್ನಾಟಕದ ಸೊಸೆ ಇಂದ್ರಾ ನೂಯಿ ಸಹೋದರಿ 71 ವರ್ಷದ ಚಂದ್ರಿಕಾ ಅವರ ಮಂತ್ರಪಠಣದ ಆಲ್ಬಂಗೆ ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿದೆ.
ಮೂರು ನದಿಗಳ ಸಂಗಮದ ಹೆಸರಿನ ಆಲ್ಬಮ್‌ನಲ್ಲಿ ಅವರು ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲರ್‌ಮನ್ ಮತ್ತು ಜಪಾನಿನ ಚೆಲೋವಾದಕ ಎರು ಮಾಟ್ಸುಮೊಟೊ ಅವರೊಂದಿಗೆ ಸೇರಿ ಹಾಡನ್ನು ಹಾಡಿದ್ದರು. ಈ ಅಲ್ಬಂನಲ್ಲಿ ವೈದಿಕ ಮಂತ್ರಗಳನ್ನು ಪಠಿಸಿದ್ದರು.
ಮ್ಯೂಸಿಕ್ ಎಂದರೆ ಪ್ರೀತಿ, ಮ್ಯೂಸಿಕ್ ನಮ್ಮೆಲ್ಲರೊಳಗೆ ಬೆಳಕನ್ನು ಬೆಳಗಿಸುತ್ತದೆ. ನಮ್ಮ ಕತ್ತಲೆಯ ದಿನಗಳಲ್ಲಿಯೂ ಸಹ ಸಂಗೀತವು ಸಂತೋಷ ಮತ್ತು ನಗುವನ್ನು ಹರಡುತ್ತದೆ ಎಂದು ಲಾಸ್ ಏಂಜಲೀಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಚಂದ್ರಿಕಾ ವೇದಿಕೆಯಲ್ಲಿ ಮಾತನಾಡಿದ್ದಾರೆ.