ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಯೋಧ್ಯೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಸ್ಥಿತಿ ನೋಡಿ ವೈದ್ಯರು ಕಣ್ಣೀರಿಟಿದ್ದಾರೆ.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಸೋಮವಾರ ಬಂಧಿಸಿದ್ದಾರೆ. ಅತ್ಯಾಚಾರಿಗಳಾದ ದಿಗ್ವಿಜಯ್ ಸಿಂಗ್ ಅಲಿಯಾಸ್ ಬಾಬಾ, ಹರಿರಾಮ್ ಕೋರಿ ಮತ್ತು ವಿಜಯ್ ಸಾಹು ಪೊಲೀಸರ ಮುಂದೆ ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.

ಕುಡಿತದ ಮತ್ತಿನಲ್ಲಿ ಅತ್ಯಾಚಾರ ಹಾಗೂ ಕ್ರೂರವಾಗಿ ಕೊಂದಿದ್ದೇವೆ, ಆಕೆ ಸತ್ತುಹೋಗಿದ್ದು ನಮಗೆ ಗೊತ್ತಾಗಿಲ್ಲ. ಸತ್ತ ನಂತರವೂ ಆಕೆಯ ಮೇಲೆ ಮೃಗಗಳಂತೆ ಎರಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಆಕೆಯ ಸಾವಿಗೆ ಅತಿಯಾದ ರಕ್ತಸ್ರಾವವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಮೂಲಗಳು ಹೇಳುವಂತೆ ಇಬ್ಬರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆದಿದೆ. ಬಾಲಕಿಯ ದೇಹದ ಮೇಲೆ 30 ಸಣ್ಣ ಹಾಗೂ ದೊಡ್ಡ ಗಾಯಗಳಿದ್ದವು. ಸಂತ್ರಸ್ತೆಯ ಎರಡೂ ಬದಿಗಳಲ್ಲಿ 24 ಪಕ್ಕೆಲುಬುಗಳಲ್ಲಿ 14 ಮುರಿದಿವೆ.

ಆಕೆಯ ಖಾಸಗಿ ಅಂಗಕ್ಕೆ ಕ್ರೂರವಾಗಿ ಇರಿದಿದ್ದಾರೆ. ಎರಡಕ್ಕೂ ಹೆಚ್ಚು ವ್ಯಕ್ತಿಗಳು ಸೇರಿ ಆಕೆಯನ್ನು ಕೊಲೆ ಮಾಡಿದ್ದಾರೆ. ಈ ವರದಿಯಲ್ಲಿ ಅವರು ಪೊಲೀಸರಿಗೆ ನೀಡಿದ್ದಾರೆ. ಘಟನೆಯ ಆರೋಪಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದು, ನಾವು ಆಕೆಯ ಹಿಂದೆ ಓಡಿ ಹೋಗಿ ಹೊಲದಲ್ಲಿ ಆಕೆಯನ್ನು ಹಿಡಿದಿದ್ದೆವು, ಕೋಲಿನಿಂದ ಆಕೆಯ ತಲೆಗೆ ಮೊದಲು ಪೆಟ್ಟು ಕೊಟ್ಟೆವು, ಆಕೆ ಯಾವಾಗ ಸತ್ತಿದ್ದಾಳೆ ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!