ಒಂದು ಬೆಳಗ್ಗೆ ಸೂರ್ಯೋದಯದ ಜೊತೆ ಎಂಜಿನ್ ಸ್ಟಾರ್ಟ್ ಮಾಡಿ, ಮುಂದೆ ಎಷ್ಟು ಕಿಲೋಮೀಟರ್ ದಾರಿ ಇದೆ ಅನ್ನೋದಕ್ಕಿಂತ ‘ಈ ಕ್ಷಣ’ವೇ ಮುಖ್ಯವಾಗುವ ಅನುಭವವೇ ರೋಡ್ ಟ್ರಿಪ್. ಆಕಾಶದ ಕೆಳಗೆ, ತೆರೆದ ಹೆದ್ದಾರಿಯಲ್ಲಿ ಗಾಳಿಗೆ ಮಾತಾಡುತ್ತಾ ಸಾಗುವ ಸವಾರಿ ಅಂದ್ರೆ ಅದಕ್ಕೆ ಸರಿಯಾದ ಬೈಕ್ ಇದ್ದೇ ಇರಬೇಕು. ಹಾಗಾದ್ರೆ, ರೋಡ್ ಟ್ರಿಪ್ ಹೊಡಿಯೋಕೆ ಯಾವ ಬೈಕ್ ನಿಜಕ್ಕೂ ಬೆಸ್ಟ್?
ರೋಡ್ ಟ್ರಿಪ್ ಬೈಕ್ ಅಂದ್ರೆ ಕೇವಲ ಲುಕ್ ಮಾತ್ರ ಅಲ್ಲ. ದೀರ್ಘ ಸಮಯ ಸವಾರಿ ಮಾಡಿದರೂ ದೇಹಕ್ಕೆ ಒತ್ತಡ ಬಾರದ ಕಂಫರ್ಟ್, ಸ್ಟೇಬಲ್ ರೈಡ್ ಕೊಡೋ ಎಂಜಿನ್, ಉತ್ತಮ ಮೈಲೇಜ್ ಮತ್ತು ಎಲ್ಲ ತರಹದ ರಸ್ತೆಗೆ ಹೊಂದಿಕೊಳ್ಳುವ ಸಸ್ಪೆನ್ಷನ್ ಮುಖ್ಯವಾಗುತ್ತೆ. ಹೀಗಾಗಿ ಕ್ರೂಸರ್ ಮತ್ತು ಅಡ್ವೆಂಚರ್ ಬೈಕ್‌ಗಳು ರೋಡ್ ಟ್ರಿಪ್ ಪ್ರಿಯರ ಮೊದಲ ಆಯ್ಕೆಯಾಗುತ್ತವೆ. ಭಾರತದಲ್ಲಿ ರೋಡ್ ಟ್ರಿಪ್ ಪ್ರಿಯರು ಹೆಚ್ಚು ನಂಬಿಕೆ ಇಡುವ ನಾಲ್ಕು ಬೈಕ್‌ಗಳ ಬಗ್ಗೆ ಇಲ್ಲಿದೆ ಒಂದು ನೋಟ.
Royal Enfield Himalayan
ಕಠಿಣ ರಸ್ತೆ, ಬೆಟ್ಟ, ಮಣ್ಣು, ಕಲ್ಲು ಯಾವ ದಾರಿಯಾದರೂ ಹಿಮಾಲಯನ್‌ಗೆ ಅಡ್ಡಿಯಾಗಲ್ಲ. ಉದ್ದವಾದ ಸೀಟ್, ಸ್ಟ್ರಾಂಗ್ ಸಸ್ಪೆನ್ಷನ್ ಮತ್ತು ಅಡ್ವೆಂಚರ್ ಡಿಎನ್‌ಎ ಇರುವ ಈ ಬೈಕ್ ಲಾಂಗ್ ರೋಡ್ ಟ್ರಿಪ್‌ಗೆ ಪರ್ಫೆಕ್ಟ್ ಆಯ್ಕೆ. ಹೈವೇ ಜೊತೆಗೆ ಆಫ್-ರೋಡ್ ಅನುಭವಕ್ಕೂ ಇದು ಸೂಕ್ತ.

KTM 390 Adventure
ಸ್ಪೋರ್ಟಿ ಲುಕ್ ಮತ್ತು ಅಡ್ವೆಂಚರ್ ಒಂದೇ ಬೈಕ್‌ನಲ್ಲಿ ಬೇಕಾದ್ರೆ, 390 ಅಡ್ವೆಂಚರ್ ಒಳ್ಳೆಯ ಆಯ್ಕೆ. ಪವರ್‌ಫುಲ್ ಎಂಜಿನ್, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಫೀಚರ್ಸ್ all-rounder ರೋಡ್ ಟ್ರಿಪ್ ಮೆಷಿನ್ ಅನ್ನಬಹುದು.

Bajaj Dominar 400
ಲಾಂಗ್ ಹೈವೇ ರೈಡ್‌ಗಳಿಗೆ ಡೊಮಿನಾರ್ 400 ಹೆಸರು ಮಾಡಿದೆ. ಸ್ಥಿರತೆ, ಪವರ್ ಮತ್ತು ಕಂಫರ್ಟ್ ಇದರ ದೊಡ್ಡ ಪ್ಲಸ್ ಪಾಯಿಂಟ್. ಗಂಟೆಗಟ್ಟಲೆ ರೈಡ್ ಮಾಡಿದರೂ ದೇಹಕ್ಕೆ ಹೆಚ್ಚು ದಣಿವು ಆಗದ ರೀತಿಯಲ್ಲಿ ಡಿಸೈನ್ ಮಾಡಲಾಗಿದೆ.

Honda CB350 / H’ness CB350
ಸ್ಮೂತ್ ಎಂಜಿನ್, ರಿಲ್ಯಾಕ್ಸ್ ರೈಡಿಂಗ್ ಪೋಶ್ಚರ್ ಮತ್ತು ಜಪಾನೀಸ್ ವಿಶ್ವಾಸಾರ್ಹತೆ ಇವೆಲ್ಲ CB350ನ ಶಕ್ತಿ. ಶಾಂತವಾಗಿ, ಮನಸ್ಸು ತುಂಬುವ ರೋಡ್ ಟ್ರಿಪ್ ಬೇಕಾದವರಿಗೆ ಇದು ಸೂಕ್ತ ಬೈಕ್.

ಒಟ್ಟಿನಲ್ಲಿ, ರೋಡ್ ಟ್ರಿಪ್‌ಗೆ ಬೈಕ್ ಆಯ್ಕೆ ನಿಮ್ಮ ರೈಡಿಂಗ್ ಸ್ಟೈಲ್ ಮೇಲೆ ಅವಲಂಬಿತ. ಆದರೆ ಈ ನಾಲ್ಕು ಬೈಕ್‌ಗಳು ರಸ್ತೆ ಮೇಲಿನ ನಂಬಿಕೆಗೆ ಯಾವತ್ತೂ ಮೋಸ ಮಾಡಲ್ಲ.



