July 10, 2026
Friday, July 10, 2026
spot_img

ಬುಮ್ರಾ ಫಾರ್ಮ್ ಟೆನ್ಶನ್: ‘ಜೋಫ್ರಾ ಆರ್ಚರ್ ನೋಡಿ ಕಲಿಯಿರಿ’ ಎಂದ ಮಾಜಿ ಆಟಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗುತ್ತಿರುವ ಬೆನ್ನಲ್ಲೇ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಾರ್ಮ್ ಕೂಡ ಚರ್ಚೆಗೆ ಗ್ರಾಸವಾಗಿದೆ.

ಟೀಮ್ ಇಂಡಿಯಾದ ಭರವಸೆಯ ಬೌಲರ್ ಎಂದೇ ಗುರುತಿಸಿಕೊಂಡಿರುವ ಬುಮ್ರಾ, ಈ ಸೀಸನ್‌ನಲ್ಲಿ ತಮ್ಮ ಮಟ್ಟದ ಬೌಲಿಂಗ್ ಪ್ರದರ್ಶಿಸಲು ಹೋರಾಟ ನಡೆಸುತ್ತಿರುವುದು ಅಭಿಮಾನಿಗಳಲ್ಲೂ ಆತಂಕ ಮೂಡಿಸಿದೆ.

ಇದನ್ನೂ ಓದಿ:

ಎಂಟು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆದಿರುವ ಬುಮ್ರಾ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಚೆಂಡಿನೊಂದಿಗೆ ಹೆಚ್ಚು ಆಕ್ರಮಣಕಾರಿ ಬೌಲಿಂಗ್ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಜೋಫ್ರಾ ಆರ್ಚರ್ ಉದಾಹರಣೆ ನೀಡಿರುವ ಶ್ರೀಕಾಂತ್, ವೇಗ ಮತ್ತು ತೀಕ್ಷ್ಣತೆಯೇ ಆರಂಭಿಕ ಓವರ್‌ಗಳಲ್ಲಿ ಯಶಸ್ಸಿನ ಗುಟ್ಟು. ಆರ್ಚರ್ ಅವರನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.

ಬುಮ್ರಾ ಶ್ರಮಿಸುತ್ತಿದ್ದರೂ ಅದು ಫಲ ನೀಡುತ್ತಿಲ್ಲ. ಅವರಲ್ಲಿ ಹಿಂದಿನ ಚುರುಕು ಕಾಣಿಸುತ್ತಿಲ್ಲ, ಬಹುಶಃ ದಣಿವು ಇದಕ್ಕೆ ಕಾರಣವಾಗಿರಬಹುದು ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆರ್ಥಿಕ ದರ ನಿಯಂತ್ರಣದಲ್ಲಿದ್ದರೂ, ವಿಕೆಟ್ ಪಡೆಯುವ ಸಾಮರ್ಥ್ಯವೇ ಈಗ ಮುಂಬೈಗೆ ಅತ್ಯಗತ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !