ಕೊನೆವರೆಗೂ ಡೆಂಗ್ಯೂ ಎಂದು ಹೇಳಿಯೇ ಇಲ್ಲ! ತುಮಕೂರಿನಲ್ಲಿ ಏಳು ವರ್ಷದ ಬಾಲಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕದಲ್ಲಿ ವೈರಲ್ ಫಿವರ್ ಜೊತೆಗೆ ಇದೀಗ ಡೆಂಘಿ ಜ್ವರ ಕೂಡ ಒಕ್ಕರಿಸಿಕೊಂಡಿದೆ. ಇದಕ್ಕೆ ಸಾಕ್ಷಿಯೆಂಬಂತೆ ಇದೀಗ ತುಮಕೂರು ಜಿಲ್ಲೆಯಲ್ಲಿ ಓರ್ವ ಬಾಲಕ ಬಲಿ ಆಗಿದ್ದಾನೆ. ಹರೀಶ್ ಕುಮಾರ್​ ಎನ್ನುವವರ ಪುತ್ರ ಕರುಣಾಕರ್​ (7) ಮೃತ ಬಾಲಕ. ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಘಟನೆ ನಡೆದಿದೆ.

ಪಾವಗಡದ ಸುಧಾ ಕ್ಲಿನಿಕ್​ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ.

ಹೀಗಾಗಿ ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಧಾ ಕ್ಲಿನಿಕ್ ಮುಂದೆ ಪ್ರತಿಭಟನೆ ಮಾಡಲಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!