Monday, January 26, 2026
Monday, January 26, 2026
spot_img

ಹಿಮಾಚಲ ಪ್ರದೇಶದ ರಸ್ತೆಗಳೇ ಕಾಣುತ್ತಿಲ್ಲ, ಭಾರೀ ಹಿಮಪಾತದಿಂದ 24 ಗಂಟೆ ಕಾರ್‌ನಲ್ಲೇ ಇದ್ದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಮಾಚಲ ಪ್ರದೇಶದಲ್ಲಿ ಉಂಟಾದ ಭಾರೀ ಹಿಮಪಾತವು ನೂರಾರು ಪ್ರವಾಸಿಗರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅತಿಯಾದ ಟ್ರಾಫಿಕ್‌ ಜಾಮ್‌ ಹಾಗೂ ಹಿಮಪಾತದಿಂದ ಜನ ಕಾರ್‌ಗಳಲ್ಲೇ ಸಿಲುಕಿದ್ದಾರೆ.

ಹಿಮಭರಿತ ರಸ್ತೆಗಳು ಮತ್ತು ಭಾರೀ ಟ್ರಾಫಿಕ್ ಜಾಮ್​ನಿಂದಾಗಿ ಮನಾಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿತು. ರಸ್ತೆ ಸಂಪರ್ಕ ಕಡಿತಗೊಂಡ ಕಾರಣದಿಂದಾಗಿ 15 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಿಮಪಾತದಿಂದ ರಸ್ತೆ ಮುಚ್ಚಿದ್ದರಿಂದಾಗಿ ಪ್ರವಾಸಿಗರಿಗೆ ಮುಂದೆ ಸಾಗಲು ಸಾಧ್ಯವಾಗದೆ ಸಿಕ್ಕ ಹೋಟೆಲ್​ಗಳನ್ನೆಲ್ಲ ಬುಕ್ ಮಾಡಿಕೊಂಡರು.

ಇದರಿಂದ ಕೆಲವು ಪ್ರವಾಸಿಗರು ಹೋಟೆಲ್ ರೂಂ ಸಿಗದೆ, ಹಿಮಪಾತದಿಂದ ಹೊರಗೂ ಹೋಗಲಾಗದೆ 24 ಗಂಟೆಗಳ ಕಾಲ ಕಾರಿನಲ್ಲೇ ಕುಳಿತಿದ್ದರು. ಹೀಗಾಗಿ, ನೀವು ಕೂಡ ಹಿಮಪಾತ ನೋಡಲು ಮನಾಲಿಗೆ ಪ್ರವಾಸ ಹೋಗುವ ಪ್ಲಾನ್ ಮಾಡಿದ್ದರೆ ಮತ್ತೊಮ್ಮೆ ಯೋಚಿಸುವುದು ಉತ್ತಮ. ಇದು ಅಲ್ಲಿಗೆ ಹೋಗಿರುವ ಪ್ರವಾಸಿಗರೇ ನೀಡಿರುವ ಸಲಹೆ.

Must Read