ಹೊಸದಿಗಂತ ಡಿಜಿಟಲ್ ಡೆಸ್ಕ್
ಕಟಕ್‌ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಸದ್ಯಅರ್ಧಕ್ಕೆ ನಿಂತಿದೆ.
ಮೈದಾನದಲ್ಲಿ ಅಳವಡಿಸಲಾಗಿರುವ ಫ್ಲಡ್ ಲೈಟ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಮಂದ ಬೆಳಕಿನಿಂದಾಗಿ ಅಂಪೈರ್ಗಳು ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಸಮಸ್ಯೆ ಸರಿಯಾಗಬಹುದೆಂದು ಉಭಯ ತಂಡಗಳ ಆಟಗಾರರು ಸಾಕಷ್ಟು ಸಮಯ ಮೈದಾನದಲ್ಲೇ ಕಾಯುತ್ತ ಕುಳಿತಿದ್ದರು. ಆದರೆ 10 ನಿಮಿಷ ಕಳೆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಂದರೆ ಫ್ಲಡ್ ಲೈಟ್ಗಳು ಆನ್ ಆಗಲಿಲ್ಲ. ಹೀಗಾಗಿ ಉಭಯ ತಂಡಗಳ ಆಟಗಾರರು ಮೈದಾನದಿಂದ ಹೊರನಡೆದಿದ್ದಾರೆ.