ಹೊಸದಿಗಂತ ಡಿಜಿಟಲ್ ಡೆಸ್ಕ್
ಏರೋ ಇಂಡಿಯಾ -2025 ವೈಮಾನಿಕ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಫೆಬ್ರವರಿ 10 ರಿಂದ ಏರ್ ಶೋ ಆರಂಭವಾಗಲಿದ್ದು, ಬೆಂಗಳೂರು ಏರ್ ಶೋ ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಏರೋ ಇಂಡಿಯಾ 2025’ ಬೆಂಗಳೂರಿನ ಯಲಹಂಕಾದಲ್ಲಿ ನಾಳೆ ಬೆಳಗ್ಗೆಯಿಂದ ಆರಂಭವಾಗಲಿದೆ. ಈ ನಿಮಿತ್ತ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟನೆ ನೆರವೇರಿಸಿದರು.
ಈ ಬಾರಿಯ ಏರ್ ಶೋನಲ್ಲಿ ರಷ್ಯನ್ ಹಾಗೂ ಅಮೆರಿಕನ್ ಫೈಟ್ ಏರ್ಕ್ರಾಪ್ಟ್ ಗಳು ಭಾಗವಹಿಸಲಿವೆ. ರನ್ ವೇ ಟು ಎ ಬಿಲಿಯನ್ ಆಪರ್ಚುನಿಟಿಸಿ ಟ್ಯಾಗ್ ಲೈನ್ ನಲ್ಲಿ ಏರ್ ಶೋ ನಡೆಯಲಿದೆ. ಈ ಶೋ ನಲ್ಲಿ 100 ದೇಶಗಳು ಹಾಗೂ 900 ಕ್ಕೂ ಹೆಚ್ಚು ಉತ್ಪಾದಕರು ಭಾಗವಹಿಸಲಿದ್ದಾರೆ. ಮಾತ್ರವಲ್ಲ ಎಐ, ಡ್ರೋನ್, ಸೈಬರ್ ಸೆಕ್ಯುರಟಿ, ಗ್ಲೋಬರ್ ಏರೋಸ್ಪೇಸ್ ನಂತಹ ನೂತನ ತಂತ್ರಜ್ಞಾನಗಳು ಇರಲಿದೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಕೂಡ ಈ ಬಾರಿಯ ಶೋನಲ್ಲಿ ಇರಲಿವೆ.
ಈ ಬಾರಿ 42438 ಸ್ಕ್ವೈರ್ ಫೀಟ್ ನಲ್ಲಿ ಏರ್ ಶೋ ಜರುಗಲಿದೆ. ಕಳೆದ ಬಾರಿ 7 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಈ ಬಾರಿ ಅದಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ನಾಳೆಯಿಂದ ಆರಂಭವಾಗುವ ಏರ್ ಶೋಗೆ ಇಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಬಳಿಕ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಏರ್ ಶೋಗೆ ಬೇಕಾದ ಸಹಕಾರ ರಾಜ್ಯ ಸರ್ಕಾರ ಮಾಡಿದೆ. ಈ ಬಾರಿಯ ಏರ್ ಶೋ ನಲ್ಲಿ ನೂತನ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಏರೋ ಶೋ ತಂತ್ರಜ್ಞಾನ ಆವಿಷ್ಕಾರಕ್ಕೆ ಕೇವಲ ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕವೇ ದೇಶದ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.
ಅಣ್ಣ ಬಸವಣ್ಣ, ಸರ್ ಎಂ ವಿಶ್ವೇಶ್ವರಯ್ಯ, ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನು ಈ ವೇಳೆ ನೆನೆಸಿಕೊಂಡರು. ಮಿಸೈಲ್ ಪ್ರೋಗ್ರಾಂ ಅಭಿವೃದ್ದಿ, ಅಸ್ತ್ರ, ಪಿನಾಕಾ ಸಿಸ್ಟ್, ಆಕಾಶ ಏರ್ ಸಿಸ್ಟಂನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದೇವೆ. ಮೇಕ್ ಇನ್ ಇಂಡಿಯಾದ ಮೂಲಕ ನಾವು ಸಾಧನೆಗೈದಿದ್ದೇವೆ. ಯುದ್ಧದ ವೇಳೆ ತಂತ್ರಜ್ಞಾನ ಆಧಾರಿತ ಯುದ್ಧೋಪಕರಣ, ಯುದ್ದ ವಿಮಾನಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಭಾರತ ಮುನ್ನುಗ್ಗುತ್ತಿದೆ. 900 ಪ್ರದರ್ಶಕರು, 30 ವಿದೇಶಾಂಗ ಸಚಿವರು, 100ಕ್ಕೂ ಹೆಚ್ಚು ವಿದೇಶಿ ಪ್ರದರ್ಶಕರು (ಎಕ್ಸಿಬಿಟರ್ಸ್), 43 ವಿವಿಧ ದೇಶಗಳ ಸೇನಾ ಮುಖ್ಯಸ್ಥರು ಭಾಗಿಯಾಗಲಿದ್ದಾರೆ ಎಂದರು.
ಏರೋ ಸ್ಪೇಸ್ ಕ್ಷೇತ್ರದಲ್ಲಿ ನಾವು ಯಶಸ್ಸು ಕಾಣುತ್ತಿದ್ದೇವೆ. ತೇಜಸ್ ಸೇರಿ ಹಲವು ಯುದ್ಧವಿಮಾನ ನಮ್ಮಲ್ಲಿದೆ. ಮಿಸೈಲ್ಸ್, ಏರ್ ಡಿಫೆನ್ಸ್ ಸಿಸ್ಟಂ ನಮ್ಮ ದೇಶದಲ್ಲಿವೆ. ಭಾರತವನ್ನ ಭದ್ರತೆ, ರಕ್ಷಣೆ ನೀಡೋಕೆ ಸಕಲ ಸಜ್ಜಾಗಿದೆ. ಇತ್ತೀಚೆಗೆ ಆಧುನಿಕ ತಂತ್ರಜ್ಞಾನ ಕೂಡ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಶ್ವದ ಬೇರೆ ಬೇರೆ ಭಾಗಗಳಿಂದ ಏರೋ ಇಂಡಿಯಾದಲ್ಲಿ ಭಾಗಿಯಾಗಲಿದ್ದಾರೆ. ವಿವಿಧ ದೇಶಗಳ ರಕ್ಷಣಾ ಸಚಿವರು ಭೇಟಿ ನೀಡಲಿದ್ದಾರೆ. ಏರೋ ಸ್ಪೇಸ್ ಕ್ಷೇತ್ರದ ಹೊಸ ಐಡಿಯಾಗಳಿಗೆ ವೇದಿಕೆ ಸಿಗಲಿದೆ. ಸಂಶೋಧನೆ, ರಕ್ಷಣಾ ವಲಯಕ್ಕೆ ಬಲ ಸಿಗಲಿದೆ. ಏರೋಸ್ಪೇಸ್ ಉದ್ಯಮಕ್ಕೆ ಈ ಏರೋ ಇಂಡಿಯಾ ಶಕ್ತಿಯಾಗಲಿದೆ ಎಂದರು.
ಇಂಡಿಯಾ ಮುಂದಿನ ದಿನಗಳಲ್ಲಿ ಡಿಫೆನ್ಸ್ ಸೂಪರ್ ಪವರ್ ಆಗಲಿದೆ. ಈ ಶೋ ಕೇವಲ ಯುದ್ದ ಶಸ್ತ್ರಾಸ್ತ್ರ ಗಳ ಪ್ರದರ್ಶನವಲ್ಲ. ಇದು ಉದ್ಯೋಗ ಸೃಷ್ಠಿಯ ಜೊತೆಗೆ ದೇಶದ ಆರ್ಥಿಕತೆಯನ್ನ ಬೂಸ್ಟ್ ಮಾಡುವ ವೇದಿಕೆ. ದೇಶದ ಸಮಗ್ರ ಅಭಿವೃದ್ದಿಗಾಗಿ ಮಾಡುತ್ತಿರುವ ಪ್ರಯತ್ನ. ಏರೋಸ್ಪೇಸ್ ಉದ್ಯಮಕ್ಕೆ ಈ ಏರೋ ಇಂಡಿಯಾ ಶಕ್ತಿಯಾಗಲಿದೆ. ಇದು ನಮ್ಮ ಶಕ್ತಿ, ನಮ್ಮ ಕಾರ್ಯ ವೈಖರಿಯನ್ನು ಪ್ರಪಂಚಕ್ಕೆ ತೋರಿಸುವಂತಹ ಕಾರ್ಯಕ್ರಮ ಇದು. ಪೊಲೀಸ್, ಸೇನೆ, ರಕ್ಷಣಾ ಇಲಾಖೆ ಈ ಕಾರ್ಯಕ್ರಮದ ಯಶಸ್ಸಿಗೆ ಸಾಕಷ್ಟು ಸಜ್ಜಾಗಿದೆ. ಸುರಕ್ಷಿತ ಏರ್ ಶೋಗೆ ಎಲ್ಲರೂ ಶ್ರಮಿಸಿದ್ದಾರೆ. ಪೊಲೀಸ್, ಕರ್ನಾಟಕ ಸರ್ಕಾರ ಹಾಗೂ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು.