ಲಾಟರಿ ವಿತರಕರು ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ ಪಾವತಿಸುವಂತಿಲ್ಲ: ಸುಪ್ರೀಂ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಲಾಟರಿ ವಿತರಕರು ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ ಪಾವತಿಸಲು ಜವಾಬ್ದಾರರಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಸಿಕ್ಕಿಂ ಹೈಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್‌ಕೆ ಸಿಂಗ್ ಅವರನ್ನೊಳಗೊಂಡ ಪೀಠವು ಒಪ್ಪಲಿಲ್ಲ.

ಯಾವುದೇ ಸಂಸ್ಥೆ ಸಂಬಂಧ ಹೊಂದಿಲ್ಲದಿದ್ದರೆ ಪ್ರತಿವಾದಿಗಳು (ಲಾಟರಿ ವಿತರಕರು) ಸೇವಾ ತೆರಿಗೆ ಪಾವತಿಸಲು ಜವಾಬ್ದಾರರಾಗಿರಲಿಲ್ಲ. ಆದಾಗ್ಯೂ, ಪ್ರತಿವಾದಿಗಳು ಸಂವಿಧಾನದ ಎಂಟ್ರಿ 62, ಪಟ್ಟಿ II ರ ಅಡಿಯಲ್ಲಿ ರಾಜ್ಯವು ವಿಧಿಸುವ ಜೂಜಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ತೀರ್ಪು ಪ್ರಕಟಿಸಿದರು.

ಲಾಟರಿ ಟಿಕೆಟ್‌ಗಳ ಖರೀದಿದಾರ ಮತ್ತು ಸಂಸ್ಥೆಯ ನಡುವಿನ ವಹಿವಾಟಿನ ಮೇಲೆ ಸೇವಾ ತೆರಿಗೆ ವಿಧಿಸಲಾಗುವುದಿಲ್ಲ, ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಸಲ್ಲಿಸಿದ ಮೇನ್ಮನವಿಗಳು ಪುರಸ್ಕಾರಕ್ಕೆ ಅರ್ಹವಲ್ಲ. ಆದ್ದರಿಂದ, ಈ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಸಿಕ್ಕಿಂ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಲಾಟರಿಗಳ ಮೇಲೆ ತೆರಿಗೆ ವಿಧಿಸುವುದು ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು, ಕೇಂದ್ರವಲ್ಲ ಎಂದು ಹೇಳಿದೆ. ಸೇವಾ ತೆರಿಗೆ ವಿಧಿಸುವ ಹಕ್ಕು ತನಗೆ ಇದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಲಾಟರಿ ಸಂವಿಧಾನದ ರಾಜ್ಯ ಪಟ್ಟಿಯ ನಮೂದು 62 ರ ಭಾಗವಾಗಿರುವ ಬೆಟ್ಟಿಂಗ್ ಮತ್ತು ಜೂಜಾಟ ಎಂಬ ಅಭಿವ್ಯಕ್ತಿಯೊಳಗೆ ಬರುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಮಾತ್ರ ತೆರಿಗೆ ವಿಧಿಸಬಹುದು ಎಂದು ಹೈಕೋರ್ಟ್ ಹೇಳಿದ್ದು ಸರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಲಾಟರಿ ಸಂಸ್ಥೆ ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಹೈಕೋರ್ಟ್ ತೀರ್ಪು ಪ್ರಕಟಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!