ಮಹಾ ಕುಂಭದ ಕಾಲ್ತುಳಿತದ ಸಾವಿನ ನಿಖರ ಸಂಖ್ಯೆ ಏಕೆ ಇಲ್ಲ?: ಕೇಂದ್ರಕ್ಕೆ ಅಖಿಲೇಶ್ ಯಾದವ್ ಪ್ರಶ್ನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಾ ಕುಂಭದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಂಗಳವಾರ ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಡಿಜಿಟಲೀಕರಣದ ಬಗ್ಗೆ ಸಾಕಷ್ಟು ಜಾಹೀರಾತು ನೀಡಲಾಗಿದ್ದರೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಬಗ್ಗೆ ನಿಖರ ಅಂಕಿ ಅಂಶಗಳು ಏಕೆ ಹೊರಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಮೊದಲ ಬಾರಿಗೆ, ಕುಂಭದಲ್ಲಿ ಭಕ್ತರು 300 ಕಿ.ಮೀ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯಗಳ ಗಡಿಗಳನ್ನು ಬಂದ್ ಮಾಡಲಾಗಿದೆ..ಇದು ‘ವಿಕ್ಷಿತ ಭಾರತ’ದ ಚಿತ್ರಣ. ಅಲ್ಲಿ ಸರ್ಕಾರಕ್ಕೆ ವಾಹನ ಸಂಚಾರವನ್ನು ನಿರ್ವಹಿಸಲು ಸಹ ಸಾಧ್ಯವಾಗುತ್ತಿಲ್ಲ. ಭೂಮಿಯ ಮೇಲಿನ ಸಮಸ್ಯೆಗಳನ್ನು ನಾವು ಪರಿಹರಿಸಲು ಸಾಧ್ಯವಾಗದಿದ್ದಾಗ ಚಂದ್ರನ ಮೇಲೆ ಹೋಗುವುದರ ಅರ್ಥವೇನು ಎಂದು ಮಾಜಿ ಸಿಎಂ ಪ್ರಶ್ನಿಸಿದರು.

ಆ ಡ್ರೋನ್‌ಗಳು ಈಗ ಎಲ್ಲಿವೆ ಎಂದು ನಾನು ಕೇಳಲು ಬಯಸುತ್ತೇನೆ?. ಡಿಜಿಟಲೀಕರಣದ ಬಗ್ಗೆ ಸಂಪೂರ್ಣ ಜಾಹೀರಾತು. ಈಗಲೂ ಅವರಿಗೆ ಮಹಾ ಕುಂಭದಲ್ಲಿ ಸಾವನ್ನಪ್ಪಿದ ಅಥವಾ ಕಳೆದುಹೋದವರ ಅಂಕಿಅಂಶಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಯಾದವ್ ಟೀಕಿಸಿದರು.

ಉತ್ತರ ಪ್ರದೇಶದಲ್ಲಿ ಅವರು ಡಬಲ್ ಎಂಜಿನ್ ಸರ್ಕಾರವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಡಬಲ್ ಎಂಜಿನ್ ಸರ್ಕಾರ ಡಬಲ್ ಪ್ರಮಾದಗಳನ್ನು ಮಾಡುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!