ಸಾಮಾಗ್ರಿಗಳು
ಒಂದು ಕೆಜಿ ಕಡಲೆಹಿಟ್ಟು
ಅರ್ಧ ಲೀಟರ್ ಎಣ್ಣೆ
ಒಂದು ಸ್ಪೂನ್ ಖಾರದಪುಡಿ
ಅರ್ಧ ಸ್ಪೂನ್ ಉಪ್ಪು
ಸ್ವಲ್ಪ ಒಣಕೊಬ್ಬರಿ
ಕಾಲು ಕೆಜಿ ಶೇಂಗಾ
ಕರಿಬೇವು
ಮಾಡುವ ವಿಧಾನ
ಕಡಲೆಹಿಟ್ಟಿಗೆ ಉಪ್ಪು,ಖಾರದಪುಡಿ, ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ
ನಂತರ ಕಾದ ಎಣ್ಣೆಗೆ ಬೋಂಡ ಎತ್ತುವ ಸಾಧನದ ಸಹಾಯದಿಂದ ಬೂಂದಿ ಹಾಗೆ ಬಿಡಿ
ನಂತರ ಶೇಂಗಾ ಹಾಗೂ ಕರಿಬೇವನ್ನು ಎಣ್ಣೆಗೆ ಹಾಕಿ
ಎಲ್ಲವೂ ಗರಿಗರಿಯಾದ ನಂತರ ತೆಗೆಯಿರಿ
ಖಾರಾಬೂಂದಿ ರೆಡಿ