ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಘ ಮಾಸದಲ್ಲಿ ಪವಿತ್ರ ಕಾವೇರಿಯಲ್ಲಿ ಲಕ್ಷಾಂತರ ಜನರು ಪುಣ್ಯಸ್ನಾನ ಮಾಡಲಿದ್ದಾರೆ.
ಹೀಗೆ ಮಾಡೋದ್ರಿಂದ ಪೂರ್ವ ಜನ್ಮದ ಪಾಪ, ಕರ್ಮಾದಿಗಳು ಕಳೆಯಲಿದ್ದು, ಪುಣ್ಯ ಲಭಿಸಲಿದೆ ಎಂಬ ಪ್ರತೀತಿ ಇದೆ. ಹಾಗಿದ್ರೆ ಮಾಘ ಶುದ್ದ ಹುಣ್ಣಿಮೆಯ ಪುಣ್ಯ ಸ್ನಾನವನ್ನು ಯಾವ ಸಮಯದಲ್ಲಿ ಮಾಡಿದ್ರೆ ಕರ್ಮಗಳು ಕಳೆದು ಪುಣ್ಯ ಲಭಿಸಲಿದೆ ಎನ್ನಲಾಗಿದೆ.
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪಾಪ ಕರ್ಮಾದಿಗಳು ಕಳೆದು, ಪುಣ್ಯ ಪ್ರಾಪ್ತಿಯಾಗಲೆಂದು ಮಾಘ ಶುದ್ದ ಹುಣ್ಣಿಮೆಯ ಪುಣ್ಯ ಸ್ನಾನ ಮಾಡಲಾಗುತ್ತೆ. ಇನ್ನು ಹಲವರು ತಾವು ಅಂದುಕೊಂಡದ್ದು ಆಗಲಿ ಎಂದು ಸ್ನಾನ ಮಾಡುತ್ತಾರೆ. ಆ ವಿಷಯ ನಿಜವಾದಲ್ಲಿ ಮತ್ತೊಮ್ಮೆ ಬಂದು ಹರಕೆಯ ರೀತಿಯಲ್ಲಿ ಸ್ನಾನ ಮಾಡುತ್ತಾರೆ.