ಇಂದು ಫ್ರಾನ್ಸ್ ​ನ ಐಟಿಇಆರ್ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಪ್ರಧಾನಿ ನರೇಂದ್ರ ಮೋದಿ ಇಂದು ಫ್ರಾನ್ಸ್​ನಲ್ಲಿ ಇಂಟರ್ನ್ಯಾಷನಲ್​ ಥರ್ಮೋನ್ಯೂಕ್ಲಿಯರ್ ಎಕ್ಸ್ಪೆರಿಮೆಂಟಲ್ ರಿಯಾಕ್ಟರ್​(ಐಟಿಇಆರ್) ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.

ಪರಮಾಣು ಸಮ್ಮಿಳನ ಶಕ್ತಿಯನ್ನು ಸೃಷ್ಟಿಸುವುದಾಗಿದೆ, ಭಾರತವು ಈ ಪ್ರಮುಖ ಯೋಜನೆಯ ಪಾಲುದಾರ. 1950ರ ಆರಂಭದಲ್ಲಿ ಪರಮಾಣು ರಿಯಾಕ್ಟರ್​ಗಳು ಮೊದಲು ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದ್ದವು. ಇಂದು ಇದು ಶುದ್ಧ, ಕಡಿಮೆ ಇಂಗಾಲದ ವಿದ್ಯುತ್ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಭಾರತದ ಪರಮಾಣು ವಲಯವು ಹೆಚ್ಚಿನ ಬೆಳವಣಿಗೆಯನ್ನು ಕಂಡಿದ್ದು, ಸರ್ಕಾರಿ ಅಂಕಿಅಂಶಗಳ ಪ್ರಕಾರ, 2014 ರಲ್ಲಿ 4,780 ಮೆಗಾವ್ಯಾಟ್ ನಿಂದ 2024 ರಲ್ಲಿ 8,180 ಮೆಗಾವ್ಯಾಟ್ ಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ದ್ವಿಗುಣಗೊಂಡಿದೆ. ಹೀಗಾಗಿ ಈ ಯೋಜನೆಯಿಂದ ಭಾರತಕ್ಕೂ ಲಾಭವಿದೆ. ದೇಶವು 2031-32 ರ ವೇಳೆಗೆ 22,480 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!