Tuesday, January 27, 2026
Tuesday, January 27, 2026
spot_img

ಸಿದ್ದರಾಮಯ್ಯರಿಂದ ಡಿಕೆಶಿ ಸಿಎಂ ಖುರ್ಚಿ ಹೇಗೆ ಕಿತ್ಕೋತಾರೆ ನೋಡ್ತಾ ಇರಿ: ಜನಾರ್ದನ ರೆಡ್ಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗಾಗಲೇ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಬಿಟ್ಟುಕೊಡಬೇಕಿತ್ತು. ಆದರೆ, ರಾಜ್ಯದಲ್ಲಿ ದೇವರಾಜ ಅರಸು ಅವರ ಸಾಧನೆಯನ್ನು ಮುರಿಯಬೇಕು ಎಂಬ ಕಾರಣಕ್ಕೆ ಅವರು ತಡ ಮಾಡಿದರು. ಈಗ ಸಂಕ್ರಾಂತಿ ಆಯ್ತು, ಬಜೆಟ್ ಬಂತು. ಆದರೆ ಯಾವ ಕಾರಣಕ್ಕೂ ಡಿ.ಕೆ. ಶಿವಕುಮಾರ ಸುಮ್ಮನೆ ಕೂರುವ ಮನುಷ್ಯ ಅಲ್ಲ. ಒತ್ತಾಯ ಪೂರ್ವಕವಾಗಿಯಾದರೂ ಸಿಎಂ ಖುರ್ಚಿಯನ್ನ ಕಿತ್ತುಕೊಳ್ತಾರೆ. ನೋಡ್ತಾ ಇರಿ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.

ಸಿದ್ದರಾಮಯ್ಯ ಈಗಾಗಲೇ ಸಿಎಂ ಸ್ಥಾನ ಬಿಟ್ಟುಕೊಡಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಆದರೆ ಅಧಿಕಾರದಿಂದ ಇಳಿದ ಮೇಲೂ ಸೂಪರ್ ಸಿಎಂ ಆಗಿರಬೇಕು, ತಮ್ಮ ಅಣತಿಯಂತೆ ಸರ್ಕಾರ ನಡೆಯಬೇಕು ಎಂಬ ಇಂಗಿತ ಸಿದ್ದರಾಮಯ್ಯ ಹೊಂದಿದ್ದಾರೆ.

ಹೀಗಾಗಿ ಸಚಿವ ಸಂಪುಟದಲ್ಲಿ ತಮ್ಮ ಬಣದ ಎಷ್ಟು ಶಾಸಕರನ್ನು ಸಚಿವರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಬಜೆಟ್ ಮುನ್ನ ಅಥವಾ ಬಳಿಕವಾದರೂ ಡಿಕ ಖಚಿತವಾಗಿ ಸಿಎಂ ಖುರ್ಚಿಯನ್ನ ಪಡೆದುಕೊಳ್ಳುತ್ತಾರೆ ಎಂದರು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !