ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾರ್ಕ್ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಕಾಮಿಡಿ ಮಾಡುತ್ತಿದ್ದ ಕಮೀಡಿಯನ್ ಸಮಯ್ ರೈನಾ ಯುಟ್ಯೂಬ್ ಶೋ ಇಂಡಿಯಾಸ್ ಗಾಟ್ ಲೇಟೆಂಟ್ ಇದೀಗ ಸಂಕಷ್ಟದಲ್ಲಿದೆ.
ಈ ಶೋನಲ್ಲಿ ಇತ್ತೀಚೆಗಷ್ಟೇ ಯುಟ್ಯೂಬ್ ಆಂಕರ್ ರಣ್ವೀರ್ ಅಲಹಾಬಾದಿಯಾ ಪೋಷಕರ ಲೈಂಗಿಕತೆ ಬಗ್ಗೆ ಕಮೆಂಟ್ ಮಾಡಿದ್ದಾರೆ. ಇದರಿಂದಾಗಿ ಇಡೀ ಶೋ ಬಗ್ಗೆ ಎಲ್ಲರಿಗೂ ಅಸಮಾಧಾನ ಉಂಟಾಗಿದೆ. ಯುಟ್ಯೂಬ್ನಲ್ಲಿ ಕೋಟಿ ಕೋಟಿ ಬರುತ್ತಿದ್ದರೂ ಸಮಯ್ ರೈನಾ ಈ ಶೋನಲ್ಲಿ ಈವರೆಗೂ ಅಪ್ಲೋಡ್ ಆಗಿರುವ ಎಲ್ಲ ಎಪಿಸೋಡ್ಗಳನ್ನು ಡಿಲೀಟ್ ಮಾಡಲು ನಿರ್ಧರಿಸಿದ್ದಾರೆ.
ಈಗ ನಡೆಯುತ್ತಿರುವ ಬೆಳವಣಿಗೆಯನ್ನು ನನ್ನಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಇಂಡಿಯಾಸ್ ಗಾಟ್ ಲೇಟೆಂಟ್ನ ಎಲ್ಲಾ ವಿಡಿಯೋಗಳನ್ನು ನನ್ನ ಚಾನೆಲ್ನಿಂದ ತೆಗೆದುಹಾಕಿದ್ದೇನೆ. ಜನರು ನಗುವಂತೆ ಮಾಡುವುದು ನನ್ನ ಉದ್ದೇಶ. ತನಿಖೆ ಸರಿಯಾಗಿ ಆಗಲು ನಾನು ಎಲ್ಲ ಅಧಿಕಾರಿಗಳ ಜೊತೆ ಸಹಕರಿಸುತ್ತಿದ್ದೇನೆ. ಧನ್ಯವಾದಗಳು ಎಂದು ಸಮಯ್ ರೈನಾ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿದ್ದಾರೆ.
ರಣವೀರ್ ಅಲಾಹಾಬಾದಿಯಾ ಅವರು ಎರಡು ದಿನಗಳ ಹಿಂದೆ ವಿಡಿಯೋ ಮಾಡಿದ್ದರು. ಅವರು ತಮ್ಮ ಹೇಳಿಕೆ ಬಗ್ಗೆ ವಿಷಾದ ಹೊರಹಾಕಿ, ಕ್ಷಮೆ ಕೇಳಿದ್ದರು. ಮಾಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ರಣವೀರ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿದ ಬಳಿಕ ಅವರು ಈ ವಿಡಿಯೋ ಮಾಡಿದ್ದರು. ಸದ್ಯ ರಣವೀರ್, ಸಮಯ್, ಅಪೂರ್ವಾ ಮೊದಲಾದವರ ವಿರುದ್ಧ ಕೇಸ್ ದಾಖಲಾಗಿದೆ.