ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಲಂಹಕದಲ್ಲಿ ನಡೆಯುತ್ತಿರುವ ‘ಏರೋ ಇಂಡಿಯಾ 2025’ ಇಂದಿನಿಂದ ಸಾರ್ವಜನಿಕರಿಗೆ ಏರ್ ಶೋ ವೀಕ್ಷಣೆಗೆ ಅವಕಾಶ ಸಿಗಲಿದೆ.
ಇಂದು, ನಾಳೆ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ ಇದೆ. ಇಂದಿನಿಂದ ಸಾರ್ವಜನಿಕರಿಗೆ ಎರಡು ದಿನ ಸಂಪೂರ್ಣ ಏರ್ ಶೋ ವೀಕ್ಷಣೆಗೆ ಮುಕ್ತವಾಗಲಿದೆ.
ಇಂದು ಕೂಡ ಬೆಳಗ್ಗೆ 9:30 ರಿಂದ 12 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆ ವರೆಗೆ ಏರ್ ಶೋ ಎರಡು ಪ್ರದರ್ಶನ ಇರಲಿದೆ.